top of page

ಜ.4 ರಂದು ಮಹನೀಯರ ಜಯಂತಿಗಳ ಪೂರ್ವಭಾವಿ ಸಭೆ : ಎಡಿಸಿ ಇ.ಬಾಲಕೃಷ್ಣಪ್ಪ

  • Writer: newsnowvijayanagar
    newsnowvijayanagar
  • Jan 3
  • 1 min read

ವಿಜಯನಗರ(ಹೊಸಪೇಟೆ), ಜನವರಿ 03 : ಜಿಲ್ಲಾಡಳಿತದಿಂದ ಆಚರಿಸುವ ಜನವರಿ ತಿಂಗಳಿನಲ್ಲಿ ನಡೆಯಲಿರುವ ವಿವಿಧ ಜಯಂತಿಗಳ ಪೂರ್ವಭಾವಿ ಸಭೆಗೆ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ತಿಳಿಸಿದ್ದಾರೆ.


ಜ.14 ರಂದು ಮಹನೀಯರಾದ ಶಿವಯೋಗಿ ಸಿದ್ದರಾಮ ಜಯಂತಿ, ಜ.19 ರಂದು ಮಹಾಯೋಗಿ ವೇಮನ ಜಯಂತಿ, ಹಾಗೂ ಜ.21 ರಂದು ಅಂಬಿಗರ ಚೌಡಯ್ಯ ಜಯಂತಿ ಆಚರಿಸಲು ಜಿಲ್ಲಾಡಳಿತದಿಂದ ಪೂರ್ವಸಿದ್ದತೆ ಕೈಗೊಳ್ಳಲು ಪೂರ್ವಭಾವಿ ಸಭೆಗೆ ತಪ್ಪದೇ ಹಾಜರಾಗುವಂತೆ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

Comments


bottom of page