top of page

ಹಲಾಲ್ ಕಟ್ ಬಜೆಟ್ ಆರ್ ಅಶೋಕ್ ಹೇಳಿಕೆಗೆ ಖಂಡನೆ.!?

  • Writer: newsnowvijayanagar
    newsnowvijayanagar
  • Mar 10
  • 1 min read
ree

ವಿಜಯನಗರ(ಹೊಸಪೇಟೆ) ಮಾ.10: ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯ 16 ನೇ ಬಜೆಟ್ ಕುರಿತು ವಿರೋಧ ಪಕ್ಷಗಳು ಸುಳ್ಳು ಮತ್ತು ಸಮುದಾಯಗಳನ್ನು ದಾರಿ ತಪ್ಪಿಸುವ ಹೇಳಿಕೆಗಳಾಗಿದೆ ಹೊರತು ಮತ್ತೇನು ಅಲ್ಲ. ಎಂದು ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಮತ್ತು ಬಿಜೆಪಿಯ ರಾಜ್ಯ ಅಧ್ಯಕ್ಷರಾದ ವಿಜಯೇಂದ್ರ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಅದೊಂದು ಹಲಾಲ್ ಕಟ್ ಬಜೆಟ್ ಅನ್ನುವ ಪದ ಬಳಸಿ ಇದು ಕೇವಲ ಮುಸ್ಲಿಮರ ಪರ ಇರುವ ಬಜೆಟ್ ಎಂದು ಬಣ್ಣಿಸುವುದು ವಿರೋಧ ಪಕ್ಷದ ನಾಯಕರಿಗೆ ಶೋಭೆಯಲ್ಲ, ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರ ಅಲ್ಲ, ಈ ರಾಜ್ಯದಲ್ಲಿರುವ ಕ್ರಿಶ್ಚನರು, ಜೈನರು, ಬೌದ್ಧರು, ಸಿಖ್ ಸಮುದಾಯದವರು ಸಹ ಅಲ್ಪಸಂಖ್ಯಾತರ ಅಡಿಯಲ್ಲಿ ಬರುವುದು ಬಹುಶಃ ಆರ್ ಅಶೋಕ್ ಅವರಿಗೆ ತಿಳಿದಂತಿಲ್ಲ ಮುಸ್ಲಿಮರು, ಬೌದ್ಧರು, ಕ್ರಿಶ್ಚಿಯನ್ನರು, ಜೈನರು, ಮತ್ತು ಸಿಖ್ ಈ ದೇಶದ ಮೂಲ ನಿವಾಸಿಗಳಲ್ಲವೇ. ಇವರೆಲ್ಲರನ್ನು ಸಹ ದೇಶದಿಂದ ಹೊರ ದೂಡುವಿರಾ..? ಆರ್ ಅಶೋಕ್ ಅವರೇ ನೀವು ವಿರೋಧ ಪಕ್ಷದ ನಾಯಕರು ಈ ಅಧಿವೇಶನದಲ್ಲಿ ಚರ್ಚಿಸ ಬೇಕಾಗಿರುವುದು ತುಂಬಾ ಇದೆ, ಈ ಬಜೆಟ್ ಮಂಡನೆಯಾದ ನಂತರ ಇದರ ಮೇಲಿನ ಚರ್ಚೆ ಬಹುಪಾಲು ನಿಮ್ಮದೇ ಅಂದರೆ ವಿರೋಧ ಪಕ್ಷದ ನಾಯಕರಾದ ನಿಮ್ಮ ಹೆಗಲ ಮೇಲಿದೆ, ಈ ವರ್ಷದ ಬಜೆಟ್ ಗಾತ್ರವು 4,09,549 ಕೋಟಿ ಈ ಬೃಹತ್ ಗಾತ್ರದ ಬಜೆಟ್ ಬಗ್ಗೆ ನೀವು ಚರ್ಚಿಸ ಬೇಕಿದೆ ಅದನ್ನು ಬಿಟ್ಟು ಕೇವಲ 4,500 ಕೋಟಿ ರೂಪಾಯಿಗಳ ಬಜೆಟ್ ಬಗ್ಗೆ ಮಾತ್ರ ಮಾತನಾಡುತ್ತಿದ್ದೀರಿ, ನಿಮ್ಮದೇ ಬಿಜೆಪಿಯ ನೇತೃತ್ವದ ಸರ್ಕಾರ ಇದ್ದಾಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರ ಬಜೆಟ್ ಮೇಲಿನ ಚರ್ಚೆಗಳನ್ನೊಮ್ಮೆ ಅವಲೋಕಿಸಿ ನೋಡಿ ಅಥವಾ ಅಂದಿನ ಯೂಟ್ಯೂಬ್ ಚಾನಲ್ ಗಳನ್ನು ಒಮ್ಮೆ ಪರಿಶೀಲಿಸಿ ನೋಡಿ ಆಗ ಬಹುಶಃ ತಮಗೆ ಅರ್ಥ ಆಗಬಹುದು .

ವಿರೋಧ ಪಕ್ಷ ಅಂದರೆ ಹೇಗೆ ಮತ್ತು ಅದರ ನಡತೆ ಅದರ ಕಾರ್ಯಕ್ಷಮತೆ ಬಗ್ಗೆ ತಮಗೆ ಅರಿವಾಗಬಹುದು ರಾಜ್ಯದ ಎಲ್ಲಾ ಬಡಜನರಿಗಾಗಿ 51 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರೆಂಟಿ ಯೋಜನೆಗಾಗಿ ಮೀಸಲಿಟ್ಟಿದ್ದಾರೆ ಹಾಗೂ ಈ ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ ಶೇಕಡ 10% ಮೀಸಲಿಟ್ಟರೇ, ಪರಿಶಿಷ್ಟರ ಹೇಳಿಕೆಗಾಗಿ 42,000 ಕೋಟಿಯನ್ನು ಮೀಸಲಿಟ್ಟಿದ್ದಾರೆ ಮತ್ತು ಅದೇ ರೀತಿ ವಿವಿಧ ಸಮುದಾಯಗಳ ಏಳಿಗೆಗಾಗಿ, ಬೆಂಗಳೂರು ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಇನ್ನು ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಸಾವಿರಾರು ಕೋಟಿಗಳನ್ನ ಮೀಸಲಿಟ್ಟಿದ್ದಾರೆ ಇದ್ಯಾವುದೂ ತಮ್ಮ ಕಾಮಾಲೆ ಕಣ್ಣಿಗೆ ಕಾಣುವುದಿಲ್ಲವೇ..?

ತಮ್ಮ ಈ ಹೇಳಿಕೆಗಳನ್ನು ಬದಲಾಯಿಸಿದೆ ಹೋದರೆ ಈ ರಾಜ್ಯದ ಪರಿಶಿಷ್ಟ ಸಮುದಾಯಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಮತ್ತು ತಮ್ಮ ಪಕ್ಷದ ವಿರುದ್ಧ ಬೀದಿಗಿಳಿದು ಹೋರಾಡ ಬೇಕಾಗುತ್ತದೆ ಎಚ್ಚರ ಎಂದು ಸೋಮಶೇಖರ್ ಬಣ್ಣದ ಮನೆ, ಹೇಳಿಕೆಯನ್ನು ಖಂಡಿಸಿದರು. ಅಧ್ಯಕ್ಷರು ಪರಿಶಿಷ್ಟ ಜಾತಿ ವಿಭಾಗದ ಸದಸ್ಯರು ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page