top of page

ಜಗದೀಶ ಕೊಪ್ಪ ಅವರ `ಮರುಭೂಮಿಯ ಹೂ’ಕೃತಿಯ ಅವಲೋಕನ

  • Writer: newsnowvijayanagar
    newsnowvijayanagar
  • Jan 18
  • 1 min read

ಕನ್ನಡ ವಿಶ್ವವಿದ್ಯಾಲಯ, ಹಂಪಿ,ಭಾಷಾ0ತರ ಅಧ್ಯಯನ ವಿಭಾಗ

‘ವ್ಯಾಖ್ಯಾನ’ ವಿದ್ಯಾರ್ಥಿಗಳ ಸಂವಾದಜಗದೀಶ ಕೊಪ್ಪ ಅವರ `ಮರುಭೂಮಿಯ ಹೂ’

ಕೃತಿಯ ಅವಲೋಕನ



“ಮರುಭೂಮಿಯ ಹೂ ಆತ್ಮಕಥೆಯು ಒಂದು ಪ್ರದೇಶಕ್ಕೂ ದೇಶಕ್ಕೂ ಸೀಮಿತವಾದುದಲ್ಲ. ಅದೊಂದು ವಿಶ್ವಾತ್ಮಕ ಪ್ರಜ್ಞೆ” ಎಂದು ಸಂಶೋಧಕರಾದ ಚೌಡಪ್ಪ ಪಿ. ಅವರು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ’ದಲ್ಲಿ ಅವರು “ಜಗದೀಶ್ ಕೊಪ್ಪ ಅವರ ‘ಮರುಭೂಮಿಯ ಹೂ’ ಕೃತಿಯ ಅವಲೋಕನ” ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ವಾರಿಸ್ ಡಿರಿ ಅವರು ೧೯೯೮ರಲ್ಲಿ ಇಂಗ್ಲೀಷ್‌ನಲ್ಲಿ ಬರೆದ ‘ಡೆಸರ್ಟ್ ಫ್ಲವರ್’ ಎಂಬ ಆತ್ಮಕಥೆಯನ್ನು ಜಗದೀಶ್ ಕೊಪ್ಪ ಅವರು ಕನ್ನಡದ್ದೇ ಕೃತಿ ಎಂಬo



ತೆ ‘ಮರುಭೂಮಿಯ ಹೂ’ ಎಂಬ ಶೀರ್ಷಿಕೆಯಲ್ಲಿ ಭಾವಾನುವಾದ ಮಾಡಿದ್ದಾರೆ. ಜಗತ್‌ಪ್ರಸಿದ್ಧ ರೂಪದರ್ಶಿಯಾಗಿದ್ದ ವಾರಿಸ್ ಡಿರಿ ಅವರು ತಮ್ಮ ಆತ್ಮಕಥೆಯಲ್ಲಿ ತೆರೆದಿಟ್ಟ ಬದುಕಿನ ಬಡತನ, ಅಪಮಾನ, ಅತ್ಯಾಚಾರ, ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿಛೇದನ ಎಂಬ ಕ್ರೂರ ಪದ್ಧತಿಗಳ ಕುರಿತು ಬರೆಯುವ ಮೂಲಕ ಇಡೀ ಜಗತ್ತೇ ಬೆಚ್ಚಿಬೀಳುವಂತೆ ಮಾಡಿದ್ದನ್ನು ಈ ಕೃತಿಯಲ್ಲಿ ಕಾಣಬಹುದು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿನೀತಾ ಜೆ.ಎಂ ಅವರು “ನೋವು ಯಾವ ಭಾಷೆಯದ್ದೇ ಆದರೂ, ಯಾವ ಖಂಡದ್ದೇ ಆದರೂ ಎಲ್ಲಾ ಕಡೆಯೂ ಅದು ಒಂದೇ ರೀತಿ ಇರುತ್ತದೆ. ಅಂತಹ ನೋವಿನ ಕಥೆ ಈ ‘ಮರುಭೂಮಿಯ ಹೂ’ ಆತ್ಮಕಥೆಯಲ್ಲಿ ಇದೆ ಎಂದರು. ಮಾನವೀಯ ಸಂವೇದನೆಯಿರುವ ಪ್ರತಿಯೊಬ್ಬರನ್ನು ಮಾರ್ಮಿಕವಾಗಿ ತಟ್ಟುವ ಕೃತಿಯಿದು. ಇದನ್ನು ಎಲ್ಲರೂ ಓದಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಎ.ಮೋಹನ್ ಕುಂಟಾರ ಅವರು, ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸಿ.ವೆಂಕಟೇಶ್ ಹಾಗೂ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರೊ. ವೆಂಕಟಗಿರಿ ದಳವಾಯಿ ಅವರು ಹಾಗೂ ಭಾಷಾ ನಿಕಾಯ ಅಧ್ಯಯನ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು, ಎಂ.ಎ ಸ್ನಾತಕೊತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ವೇತಾ ಬಾಳಿ ಅವರು ಸ್ವಾಗತಿಸಿದರು, ಬರ‍್ಗಿ ಜಯಶ್ರೀ ಅವರು ನಿರೂಪಿಸಿದರು, ರೆಬೆಕ್ಕ ಅವರು ವಂದಿಸಿದರು.

Comments


bottom of page