top of page

ಭೂಮಿಕಾ ಸಮಾಜ ಸೇವಾ ಟ್ರಸ್ಟ್ ನ ವಾರ್ಷಿಕೋತ್ಸವ ಸಮಾರಂಭ

  • Writer: newsnowvijayanagar
    newsnowvijayanagar
  • Mar 10
  • 2 min read

Updated: Mar 11




ree

ವಿಜಯನಗರ(ಹೊಸಪೇಟೆ) :ನಗರದ ಜೆ ಪಿ ಭವನದಲ್ಲಿ ಭೂಮಿಕಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ವಿಶ್ವಚೇತನ ಅಂಧ ಮಕ್ಕಳ ವಸತಿ ಶಾಲೆ ಹಾಗೂ ಆಕಾಂಕ್ಷ ಮಕ್ಕಳ ವಸತಿ ರಹಿತ ದಿವ್ಯಾಂಗ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಸಮಾರಂಭ 2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

.ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಶ್ರೀ ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮಿಗಳು ಮಕ್ಕಳನ್ನು ಒಂದು ಕಥೆಯ ಮೂಲಕ ಸಮಾಜದ ಟಿಪ್ಪಣಿಗಳಿಗೆ ಕಿವಿ ಕೊಡದೆ ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಂಡು ಸಾಧನೆ ಮಾಡಬೇಕೆಂದು ನಮ್ಮಲ್ಲಿ ಒಳಗಣ್ಣಿನಿಂದ ಸಮಾಜವನ್ನು ನೋಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಪರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ರಾಮನ ಜಪ, ಆದರ್ಶ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ದಿನನಿತ್ಯ ಸ್ಮರಿಸುವ ಮೂಲಕ ಹಿಂಸೆ ಮಾಡದೆ ಬದುಕ ಬೇಕು.

ಸಮಾಜದಲ್ಲಿ ಮತ್ತೊಬ್ಬರ ಜೀವನ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು, ಸಮಾಜದಲ್ಲಿ ಮದುವೆ ಸಮಾರಂಭಗಳಲ್ಲಿ ಮನೆ ಪ್ರವೇಶ ಕಾರ್ಯಕ್ರಮಗಳಲ್ಲಿ ಇಂತಹ ಶಾಲೆಗಳ ಅಭಿವೃದ್ಧಿಗೆ ಹಾಗೂ ಶ್ರೇಯಸಿಗೆ ಒಂದು ಪೆಟ್ಟಿಗೆಯನ್ನು ಇಟ್ಟು ಕಾಣಿಕೆ ರೂಪದಲ್ಲಿ ಬಂದಿರುವ ಹಣವನ್ನು ಸಂಗ್ರಹಿಸಿ ಇಂತಹ ಸಂಸ್ಥೆಗಳಿಗೆ ನೀಡುವುದು ಅತ್ಯಂತ ಸೂಕ್ತ ಭಗವಂತನ ಸೇವೆ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂದು ನೆರೆದಿದ್ದ ಸಭಿಕರಿಗೆ ಸಾರ್ವಜನಿಕರಿಗೆ ತಿಳಿಸಿದರು.

ಪ್ರಾಸ್ತಾವಿಕ ಮಾತಾಡಿದ ಸಂಸ್ಥೆಯ ಅಧ್ಯಕ್ಷರು ಗಂಗಾಧರ್ ಗಡಾದ ವಿಶೇಷ ಶಿಕ್ಷಣದ ಮೂಲಕ ಪ್ರಗತಿ ಸಾಧಿಸಲು ನಮ್ಮ ಭೂಮಿಕಾ ಸಮಾಜ ಸೇವಾ ಟ್ರಸ್ಟ್ ವಿಶ್ವಚೇತನ ಅಂಧ ಮಕ್ಕಳ ವಸತಿ ಶಾಲೆ ಜೊತೆಯಲ್ಲಿ ಆಕಾಂಕ್ಷ ಮಕ್ಕಳ ವಸತಿ ರಹಿತ ಶಾಲೆ ಯನ್ನು ಮಿಲಿನಗೊಳಿಸಿ ಕೊಂಡು ಸೇವೆ ಆಶ್ರಯ ಮತ್ತು ಆಸರೆ ತತ್ವಗಳ ನಡುವೆ ನಡೆಸಿಕೊಂಡು ಬರುತ್ತಿದ್ದೇವೆ ಎರಡು ಸಂಸ್ಥೆಗಳು ಸಮಾಜದ ಮುಖ್ಯ ವಾಹಿನಿಗೆ ವಿಶೇಷ ಚೇತನರನ್ನು ತರಲು ಕ್ರೀಡಾಕೂಟಗಳನ್ನು ಹಮ್ಮಿಕೊಂಡು ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ನನ್ನ ಕುಟುಂಬ ನನಗೆ ಬೆನ್ನೆಲುಬಾಗಿ ನಿಂತು ಪ್ರೇರಣೆ ನೀಡಿದ್ದಾರೆ ಸಹಾಯ ಮಾಡುತ್ತಿದ್ದಾರೆ ಎಲ್ಲರ ಪರಿಶ್ರಮದಿಂದ ಕಾಯಕವೇ ಕೈಲಾಸ ಎಂಬ ತತ್ವದ ಅಡಿಯಲ್ಲಿ ನಾನು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿ ನಮ್ಮ ಸಂಸ್ಥೆಯೇ ಕೀರ್ತಿಯನ್ನು ಮಕ್ಕಳು ತಂದಿದ್ದಾರೆ. ಸಾಮಾನ್ಯರಿಗಿಂತ ಉತ್ತಮ ಶಕ್ತಿ ಹಾಗೂ 'ಸಾಮಾನ್ಯರಿಗಿಂತ ಬುದ್ಧಿವಂತರಾಗಿರುವ ವಿಶೇಷಚೇತನರನ್ನು ವಿಶೇಷಚೇತನ ಮಕ್ಕಳ ಶಾಲೆಗಳಿಗೆ ಕಳುಹಿಸಬೇಕಾದ ಅನಿವಾರ್ಯತೆ ನಗರದಲ್ಲಿ ಸೃಷ್ಟಿಯಾಗುತ್ತಿದೆ.ದೇಶದಲ್ಲಿ ಕೀಮೋಥೆರಪಿಗೆ ಚಿಕಿತ್ಸೆ ನೀಡುವ ಪ್ರಸಿದ್ಧ ವೈದ್ಯರೊಬ್ಬರು ಕೂಡ ವಿಶೇಷಚೇತನರು. ವ್ಹೀಲ್‌ಚೇರ್‌ನಲ್ಲೇ ಬಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ. ರಾಹುಲ್‌ ಬಜಾಜ್‌ ಎಂಬ ದೃಷ್ಟಿ ವಿಶೇಷಚೇತನ ವಕೀಲರಿದ್ದಾರೆ. ಇಂಥಹ ಹಲವು ಸಾಧಕರು ದೇಶದಲ್ಲಿದ್ದಾರೆ. ಇವರು ಸಾಮಾನ್ಯರಿಗಿಂತ ಉತ್ತಮ ಕೆಲಸ ಮಾಡುವ ಶಕ್ತಿ ಹೊಂದಿದ್ದಾರೆ, ಎಂದು ಹೇಳಿದರು.ರಾಜ್ಯಮಟ್ಟದ ವಿಶಿಷ್ಟ ಚೇತನರಿಗಾಗಿ ವಿಶೇಷ ಪ್ರಶಸ್ತಿಯನ್ನು ಅಂಜಿನಪ್ಪ ತಳವಾರ್ ಕೆ.ಎ.ಎಸ್. ಉಪ ಖಜಾನಾಧಿಕಾರಿಗಳು ಕೊಟ್ಟೂರು ಇವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೆ, ವೆಂಕಟೇಶ್ ಮೂರ್ತಿ ಸಹಾಯ ನಿರ್ದೇಶಕರು ಖಜಾನೆ ಹಾಗೂ ಡಾ,ಜೆ ಎಸ್ ಅಶ್ವತ್ ಕುಮಾರ್ ಮುಖ್ಯ ಪಶು ವೈದ್ಯಧಿಕಾರಿಗಳು ಮುನಿರಾಬಾದ್ ಹಾಗೂ ಮುಗದ ನಾಗರಾಜ್ ಅಧ್ಯಕ್ಷರು ಕಿರಾಣಿ ವರ್ತಕರ ಸಂಘ ಮತ್ತು ಶ್ರೀಮತಿ ರಮಾ ಮುರಳಿ ಅಧ್ಯಕ್ಷರು ಲೋಕ ನಾಯಕ ಜಯಪ್ರಕಾಶ್ ನಾರಾಯಣ ಸರ್ವೋದಯ ಟ್ರಸ್ಟ್ ಹಾಗೂ



ಪ್ರಸಾದ್ ಹೆಗಡೆ ಉದ್ಘೋಷಕರು ಆಕಾಶವಾಣಿ ಕಾರ್ಯಕ್ರಮವನ್ನು ನಿರೂಪಿಸಿದರು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಸರ್ವರೂ ಸದಸ್ಯರು ಇತರರು ಉಪಸ್ಥಿತರಿದ್ದರು

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page