top of page

ದಲಿತ ಸೇನೆ : ನಗರ ಘಟಕದ ಪದಾಧಿಕಾರಿಗಳ ಆಯ್ಕೆ

  • Writer: newsnowvijayanagar
    newsnowvijayanagar
  • May 2
  • 1 min read
ree

ಹೊಸಪೇಟೆ ಮೇ,02:ನಗರದ ವರಕೇರಿ ಗ್ರಂಥಾಲಯ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಮತ್ತು ದಲಿತ ಸೇನೆಯ ಪದಾಧಿಕಾರಿಗಳ ಆಯ್ಕೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆಯನ್ನು ಹಿರಿಯ ಮುಖಂಡರಾದ ರಾಮಕೃಷ್ಣ. ಈಶ್ವರ್. ರಂಗಮ್ಮ. ಬಸವರಾಜ್. ಇಂತಿಯಾಜ್, ರಫೀಕ್ ವಹಿಸಿದ್ದರು ಜ್ಯೋತಿ ಬೆಳಗಿಸುವ ಮೂಲಕ ಬುದ್ಧ ಬಸವ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು, ರಾಮಕೃಷ್ಣರವರು ಮಾತನಾಡಿ ಯುವಕರು ದುಷ್ಟ ಚಟಕ್ಕೆ ಬಲಿಯಾಗಬಾರದು, ಸರ್ಕಾರದ ಸೌಲಭ್ಯ ಮತ್ತು ಕೌಶಲ್ಯ ತರಬೇತಿ ಪಡೆದು 'ಯುವಕರು ಮುಂದೆ ಬರಬೇಕು ಎಂದು ಹೇಳಿದರು.ನಂತರ ಮಾಜಿ ನಗರಸಭೆ ಸದಸ್ಯರಾದ ಬಸವರಾಜ್ ಮಾತನಾಡಿ , ನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಕಡಿವಾಣ ಹಾಕಬೇಕು ಜಿಲ್ಲಾಧಿಕಾರಿಗೆ ಮನವಿ ಮಾಡುವ ಮೂಲಕ ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ರಾಮಕೃಷ್ಣ.,,ಚಿದಾನಂದಪ್ಪ.ಜಿ ಕೊಲ್ಲಾಪುರಿ, ಜಿಲ್ಲಾ ಅಧ್ಯಕ್ಷರು, ಸ್ಥಳೀಯ ಮುಖಂಡರು ಹಾಗೂ ಪದಾಧಿಕಾರಿಗಳಿಗೆ ದಲಿತ ಸೇನೆ ಸಂಘದ ಆದೇಶ ಪತ್ರ ನೀಡಿದರು ಘಟಕದ ಅಧ್ಯಕ್ಷರಾಗಿ ಎಂ‌.ಶಿವರಾಜ್ ಉಪಾಧ್ಯಕ್ಷರಾಗಿ ಬಿ.ಶರೀಫ್, ಗೌರವ ಅಧ್ಯಕ್ಷರಾಗಿ ,ಪ್ರಧಾನ ಕಾರ್ಯಧ್ಯಕ್ಷರಾಗಿ ದಾಸರ ಚಿದಂಬರ್ ,ಸಹ ಕಾರ್ಯದರ್ಶಿ ಈರಣ್ಣ ಖಜಾಂಚಿ ದಾಸರ ಮಲ್ಲಿಕಾರ್ಜುನ ಸಂಘಟನೆ ಕಾರ್ಯದರ್ಶಿ ಚಂದ್ರಹಾಸ,ಅಭಿಷೇಕ್,ಹೆಚ್ ಗೌತಮ್ ಸಲಹೆಗಾರರಾಗಿ, ಆನಂದ್,ಸಿದ್ದಾರ್ಥ್ ಇತರರು ಉಪಸ್ಥಿತರಿದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page