top of page

ರಾಮಂಜನೇಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ 1 ಲಕ್ಷ ರೂ ದೇಣಿಗೆ,

  • Writer: newsnowvijayanagar
    newsnowvijayanagar
  • Mar 26
  • 1 min read

ಹೊಸಪೇಟೆ ಮಾ.26:ನಗರದ ರಾಣಿಪೇಟೆಯ ಶ್ರೀ ರಾಮಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಮಪೂಜ್ಯ ಡಾ ಡಿ. ವೀರೇಂದ್ರ ಹೆಗ್ಗಡೆ ಅವರು



1 ಲಕ್ಷ ರೂ ದೇಣಿಗೆ ನೀಡಿದ್ದು ಈ ಮೊತ್ತದ ಡಿ ಡಿ ಯನ್ನು ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಅವರು ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ತಿರುಮಲ ಅವರಿಗೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವ ಊರಿನಲ್ಲಿ ದೇವಸ್ಥಾನಗಳು ಚೆನ್ನಾಗಿರುತ್ತವೆಯೋ ಆ ಊರಿನಲ್ಲಿ ಉತ್ತಮ ಸಂಸ್ಕಾರ ಇರುತ್ತದೆ ಮನುಷ್ಯನಿಗೆ ಹಾಗೂ ಸಕಲ ಜೀವರಾಶಿಗಳಿಗೆ ಏನಾದರೂ ತೊಂದರೆಯಾದಾಗ ಮೊದಲು ನೆನೆಯೋದೇ ದೇವರನ್ನು ಹಾಗಾಗಿ ನಮ್ಮನ್ನು ಕಾಪಾಡುವ ಆ ದೇವರಿಗೆ ಒಂದು ಉತ್ತಮವಾದ ಮಂದಿರವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಆದರೆ ಇಂತಹ ಗುಡಿಗಳನ್ನು ನಿರ್ಮಾಣ ಮಾಡುವುದು ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಅದಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಆ ಕಾರ್ಯ ಪೂರ್ಣಗೊಳ್ಳುತ್ತದೆ ಇದನ್ನು ಮನಗಂಡಂತಹ ಪೂಜ್ಯರು ಕ್ಷೇತ್ರದ ವತಿಯಿಂದ ದೇಣಿಗೆ ನೀಡುವಂತಹ ಮಹತ್ಕಾರ್ಯವನ್ನು ಮಾಡುತ್ತಿದ್ದು ಇಂತಹ ಭಕ್ತಿ ತುಂಬಿದ ಕಾರ್ಯಕ್ರಮಗಳಿಗೆ ತಾವೆಲ್ಲರೂ ಕೈಜೋಡಿಸ ಬೇಕೆಂದು ತಿಳಿಸಿದರು ಹಾಗೂ ನಗರ ಸಭೆಯ ಅಧ್ಯಕ್ಷರಾದ ರೂಪೇಶ್ ಅವರು ಉಪಸ್ಥಿತರಿದ್ದು ಧರ್ಮಸ್ಥಳ ಸಂಸ್ಥೆಯ ಸಾಮಾಜಿಕ ಕಳಕಳಿಯ ಕಾರ್ಯಗಳು ಭಗವಂತ ಮೆಚ್ಚುವಂತಹ ಕಾರ್ಯಕ್ರಮಗಳಾಗಿವೆ ಕರ್ನಾಟಕದ ಪ್ರತಿಯೊಂದು ಹಳ್ಳಿಯನ್ನು ತಲುಪಿರುವಂತಹ ಏಕೈಕ ಸಂಸ್ಥೆ ಎಂದರೆ ಅದು ಧರ್ಮಸ್ಥಳ ಸಂಸ್ಥೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು ಎಂದರು

ಈ ವೇಳೆ ಸಂಸ್ಥೆಯ ತಾಲೂಕಿನ ಯೋಜನಾಧಿಕಾರಿ ಮಾರುತಿ ಎಸ್ ದೇವಸ್ಥಾನ ಕಮಿಟಿಯ ಗೌರವ ಅಧ್ಯಕ್ಷರು ಬಿ ಮುರುಳಿಮೋಹನ್ ಅಧ್ಯಕ್ಷರು ಡಿ ತಿರುಮಲೇಶ್.ಪ್ರಧಾನ ಕಾರ್ಯದರ್ಶಿ ಏನ್ ವೇಣುಗೋಪಾಲ್.ಖಜಾಂಚಿ .ವಿ ಮಹೇಶ್ ಕುಮಾರ್..ಉಪಾಧ್ಯಕ್ಷರು ಕೆ, ಸುರೇಶ. ಎಂ ಪ್ರಸಾದ್,ಏನ್ ದೀಪು.ವಿ, ಆರ್ ರಾಜೇಶ್. ಸಹಕಾರ್ಯದರ್ಶಿ.ಸಿ ರಾಘವೇಂದ್ರ.ಸಹ ಖಜಾ0ಚಿ.ಕೋಟೇಶ್ವರ.ಸಂಘಟನಾ ಕಾರ್ಯದರ್ಶಿ ಎ ಸಂಜೀವ್ ರೆಡ್ಡಿ. ಕಾನೂನು ಸಲಹೆಗಾರ.ಬಿ ಸಂತೋಷ್ ಕುಮಾರ್.

ಸದಸ್ಯರು.ಎಂ.ಕಿರಣ್ ಕುಮಾರ್.ಎಂ.ಲಕ್ಷ್ಮಣ ವೆಂಕಟೇಶ್,ಒಕ್ಕೂಟದ ಅಧ್ಯಕ್ಷರು ಧನಲಕ್ಷ್ಮೀ ವಲಯದ ಮೇಲ್ವಿಚಾರಕಿ ವಿನುತಾ ಸೇವಾ ಪ್ರತಿನಿಧಿ ಸುವರ್ಣಮ್ಮ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

Comentarios


bottom of page