top of page

ಕುಡಿಯುವ ನೀರಿನ ಅರವಟ್ಟಿಗೆ ಆರಂಭ

  • Writer: newsnowvijayanagar
    newsnowvijayanagar
  • Mar 11
  • 1 min read

ವಿಜಯನಗರ(ಹೊಸಪೇಟೆ) ಮಾ,11:ಚಿತ್ತವಾಡ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕುಡಿಯುವ ನೀರಿನ ಅರವಟ್ಟಿಗೆ ಆರಂಭ


ree

ವಿಜಯನಗರ(ಹೊಸಪೇಟೆ) ಬಿಸಿಲಿನ ತಾಪಮಾನ ಹೆಚ್ಚಾದಂತೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗಲಿದೆ. ಜನಸಾಮಾನ್ಯರಿಗೆ ನೀರಿನ ದಾಹ ತಣಿಸಲು ಆರೋಗ್ಯ ಇಲಾಖೆಯಿಂದ ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಂಕರ್ ನಾಯ್ಕ ಹೇಳಿದರು. ನಗರದ ಚಿತ್ತವಾಡ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಿ ಸೋಮವಾರ ಮಾತನಾಡಿದರು,


ಹೃದ್ರೋಗಿಗಳು, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು, ನವಜಾತ ಶಿಶುಗಳು,ಚಿಕ್ಕ ಮಕ್ಕಳು, ಬಾಣಂತಿಯರು, ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಅಲ್ಕೋಹಾಲ್,ಚಹಾ,ಕಾಫಿ ಸೇರಿದಂತೆ ಹಾನಿಕಾರಕ ತಂಪು ಪಾನೀಯ ಸೇವನೆ ಮಾಡಬಾರದು.ಹೆಚ್ಚು ಪ್ರೊಟೀನ್‌ಯುಕ್ತ ಅಹಾರ ಸೇವನೆ ಹಾಗೂ ಕೆಂಪು ಮಾಂಸ ತಿನ್ನುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ಶುದ್ಧ ಕುಡಿಯುವ ನೀರನ್ನು ದಿನಕ್ಕೆ ಹೆಚ್ಚು ಕುಡಿಯುವುದರಿಂದ ದೇಹದಲ್ಲಿ ಶುಷ್ಕತೆ ಉಂಟಾಗದಂತೆ ನಿಗಾ ವಹಿಸಬೇಕು. ಆರಂಭದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಮುಂಜಾಗ್ರತೆ ಕ್ರಮಗಳನ್ನು ಪಾಲಿಸಬೇಕಿದೆ.



ಇತರೆ ಸಂಘ, ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಸ್ಥಳೀಯರಿಗೆ ಕುಡಿಯುವ ನೀರು ಸಿಗುವಂತೆ ಅರವಟ್ಟಿಗೆಗಳನ್ನು ಹೆಚ್ಚಾಗಿ ತೆರೆಯಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಜಂಬಯ್ಯ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ,ತಾಲೂಕು ಆರೋಗ್ಯ ಅಧಿಕಾರಿ ಡಾ.ಬಸವರಾಜ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page