top of page

ಹಂಪಿ ಉತ್ಸವಕ್ಕೆ ದಿನ ನಿಗದಿ,ಫೆಬ್ರವರಿ 28, ಮಾರ್ಚ್1, 2

  • Writer: newsnowvijayanagar
    newsnowvijayanagar
  • Jan 2
  • 1 min read


ವಿಜಯನಗರ(ಹೊಸಪೇಟೆ) ಜ,2: ವಿಶ್ವ ಪಾರಂಪರಿಕ ತಾಣ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 28 ರಿಂದ ಮೂರು ದಿನಗಳ ಕಾಲ ನಡೆಸಲು ಬೆಂಗಳೂರಿನಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ.


ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್‌ ಖಾನ್ ಅವರು ಗುರುವಾರ ಬೆಳಗ್ಗೆ ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸಮ್ಮತಿ ಪಡೆದಿದ್ದಾರೆ.ಫೆ.28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವ ಉದ್ಘಾಟನೆ ಮಾಡಲಿದ್ದಾರೆ.


ಮಾ.01 ಮತ್ತು 02 ರಂದು ಕಾರ್ಯಕ್ರಮ ನಡೆಯಲಿದೆ. ಮಾ.02 ರಂದು ಕೊನೆಯ ದಿನ ಸಮಾರೋಪ ಸಮಾರಂಭ ನಡೆಯಲಿದೆ. ಹಂಪಿ ಉತ್ಸವ ಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರಿಗೆ ಉಸ್ತುವಾರಿ ಸಚಿವ ಸೂಚನೆ ನೀಡಿದ್ದಾರೆ,



댓글


bottom of page