top of page

ಹಂಪಿಯಲ್ಲಿ ಪ್ರತಿಯೊಂದು ‌ಕಲ್ಲು ಇತಿಹಾಸ ಹೇಳುತ್ತದೆ- ಸಚಿವ ಎಚ್. ಕೆ. ಪಾಟೀಲ್

  • Writer: newsnowvijayanagar
    newsnowvijayanagar
  • Mar 2
  • 2 min read


ವಿಜಯನಗರ. (ಹೊಸಪೇಟೆ) ಹಂಪಿಯ ಪ್ರತಿಯೊಂದು ಕಲ್ಲು ಇತಿಹಾಸ ಹೇಳುತ್ತದೆ. ಇದಕ್ಕೆ ಇತಿಹಾಸಕಾರು ಹಾಗೂ ಜಗತ್ತೆ ಹೊಗಳುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಕೆ. ಪಾಟೀಲ್ ಹೇಳಿದರು.

ಅವರು ಶನಿವಾರ ಎಂ. ಪಿ. ಪ್ರಕಾಶ್ ವೇದಿಕೆಯಲ್ಲಿ ಕನ್ನಡ ‌ಮತ್ತು ಸಾಂಸ್ಕೃತಿಕ ಇಲಾಖೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವಿಜಯನಗರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹಂಪಿ ಉತ್ಸವ- 2025 ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಂಪಿ ಮನರಂಜನೆಯ ಸ್ಥಳ ಅಲ್ಲ. ಹೆಮ್ಮೆಯ ಸ್ಥಳ ಇದರ ವಾರಸುದಾರರು ನಾವು. ಸರ್ವರನ್ನು ಒಳಗೊಂಡ ವಿಜಯನಗರ ಸಾಮ್ರಾಜ್ಯವಾಗಿತ್ತು. ಹಂಪಿ ಗಂಡುಮೆಟ್ಟಿದ ಸ್ಥಳವಾಗಿದ್ದು ನಾವೆಲ್ಲರೂ ಈ ಉತ್ಸವವನ್ನು ಅಭಿಮಾನದಿಂದ ಆಚರಣೆ

ಮಾಡುತ್ತಿದ್ದೆವೆ. ಸಿದ್ರಾಮಯ್ಯನವರ ವಿಶೇಷ ಪ್ರೇರಣೆ ಬೆಂಬಲ ಇದಕ್ಕೆ ಇದೆ. ಈ ಉತ್ಸವ ಬಂದಾಗ ಎಂ.ಪಿ. ಪ್ರಕಾಶ ಅವರ ನೆನಪು ಹಾರುವದಿಲ್ಲ. ಹಂಪಿ ನಮ್ಮದು ನಮ್ಮ ಹೆಮ್ಮೆ ಎಂದರು.

25 ಸಾವಿರ ಸ್ಮಾರಕಗಳು ನಮ್ಮ ರಾಜ್ಯದಲ್ಲಿವೆ ಎಂದು ಗರ್ವದಿಂದ ಹೇಳುತ್ತೆವೆ. ಕರ್ನಾಟಕದಲ್ಲಿ ಸ್ಮಾರಕಗಳನ್ನು ದತ್ತು ಪಡೆಯುವ ಮೂಲಕ ಸ್ಮಾರಕಗಳ ಮಾಡಲಾಗುತ್ತಿದೆ. ಇಂದು ಮೂರು ಲಕ್ಷಿಕ್ಕಿಂತ ಹೆಚ್ಚು ಜನರು ಸೇರಿದ್ದಾರೆ. ಇದರಿಂದ ನಮಗೆ ತುಂಭಾ ಸಂತೋಷವಾಗುತ್ತಿದೆ. ಈ ಕಾರ್ಯಕ್ರಮ ಏರ್ಪಾಡು ಮಾಡುವಲ್ಲಿ ಬಹಳ ‌ಜನರ ಪಾತ್ರವಿದೆ. ಜನ ಸಾಗರದಂತೆ ಹರಿದು ಬಂದಿದ್ದಾರೆ. ನಾವು ನೀಡಿದ ಎಲ್ಲಾ ಸೂಚನೆಗಳನ್ನು ಅಧಿಕಾರಿಗಳು ‌ಪಾಲನೆ ಮಾಡಿದ್ದಾರೆ ಎಂದರು.

ಹಂಪಿಗೆ ಬರುವವರು ಲಕ್ಕುಂಡಿ. ಬದಾಮಿ. ವಿಜಯಪುರಕ್ಕು ಹೋಗಬೇಕು. ಉತ್ತರ ಕರ್ನಾಟಕ ಭವ್ಯ ಪರಂಪರೆಯ ನಾಡಾಗಿದೆ. ದೊಡ್ಡ ಕೆಲಸ ಆದಾಗ ಯಾರು ಮಾಡಿದರು ನೆನೆಯುತ್ತೆವೆ ಎಂದು ಹೇಳಿದರು.

ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್. ಆರ್. ಗವಿಯಪ್ಪ ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ ಹಂಪಿ ಉತ್ಸವದಲ್ಲಿ ನಿನ್ನೆಗಿಂತ‌ ಇಂದು ಹೆಚ್ಚಿನ ಜನರು ಬಂದಿದ್ದಾರೆ. ಹೀಗೆ ಉತ್ಸವ ನಡಿತಾ ಇರಬೇಕು. ಪ್ರವಾಸೋದ್ಯಮ ಸಚಿವರು ಹಂಪಿಯ ಮೇಲೆ ಹೆಚ್ಚಿನ ಗಮನಕೊಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಂಪಿ‌ ಉತ್ಸವ ಈ ವರ್ಷ ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದೆವೆ. ಹಂಪಿಯ ಮಹಾನವಮಿ ದಿಬ್ಬದ ಸ್ಪೂರ್ತಿಯೆ ಮೈಸೂರು ದಸರಾ ಆಗಿದೆ. ಇತರೆ 5 ಸ್ಟೇಜಗಳನ್ನು ಮಾಡಲಾಗಿದೆ. ಶೇ. 80 ಪ್ರತಿಶತ ಸ್ಥಳೀಯ ಕಲಾವಿದರಿಗೆ ಈ ಉತ್ಸವದಲ್ಲಿ ಅವಕಾಶ ನೀಡಲಾಗಿದೆ. ಉತ್ಸವದಲ್ಲಿ ದೂಳು ಬರದಂತೆ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಗಳೂರು ಕ್ಷೇತ್ರದ ಶಾಸಕರಾದ ಬಿ. ದೇವೇಂದ್ರಪ್ಪ. ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್.ಟಿ. ಶ್ರೀ ನಿವಾಸ. ಹೊಸಪೇಟೆ ನಗರಸಭೆ ಅಧ್ಯಕ್ಷರಾದ ರೂಪೇಶ ಕುಮಾರ್. ಹಂಪಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಜನಿ ಷಣ್ಮುಖಪ್ಪಗೌಡ.

ಜಿಲ್ಲಾ ಪಂಚಾಯತ ಮುಖ್ಯ ‌ಕಾರ್ಯನಿರ್ವಾಹಕ ಅಧಿಕಾರಿ ನೋಗ್ಜಾಯ್ ಮೋಹ್ಮದ್ ಅಲಿ ಅಕ್ರಮ್ ಷಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿ ಬಾಬು ಬಿ. ಎಲ್. ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page