top of page

ಹಂಪಿ ಪ್ರವಾಸಿ ಪೊಲೀಸರಿಂದ ಅಪರಾಧ ಜಾಗೃತಿ ಕಾರ‍್ಯಕ್ರಮ

  • Writer: newsnowvijayanagar
    newsnowvijayanagar
  • Dec 25, 2024
  • 1 min read

ವಿಜಯನಗರ(ಹೊಸಪೇಟೆ).ಡಿ, 25;ವಿಶ್ವ ಪ್ರಸಿದ್ಧ ಐತಿಹಾಸಿಕ ಹಂಪಿಗೆ ಲಕ್ಷಾಂತರ ಜನ ದೇಶ, ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು,ಹಂಪಿ ಪ್ರವಾಸಿ ಪೊಲೀಸ್ ಠಾಣೆ ವತಿಯಿಂದ ದೇಶ ಮತ್ತು ವಿದೇಶಿ ಪ್ರವಾಸಿಗರಿಗೆ, ಸ್ಥಳೀಯ ನಿವಾಸಿಗರಿಗೆ, ವಿದ್ಯಾರ್ಥಿಗಳಿಗೆ,ಆಟೋ ಚಾಲಕರು ಮತ್ತು ಪ್ರವಾಸಿ ಗೈಡ್ ಗಳಿಗೆ ಅಪರಾಧ ತಡೆ ಮಾಸಾ ಆಚರಣೆ ಕಾರ್ಯಕ್ರಮವನ್ನು ಹಂಪಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಕುಮಾರ ನಾಯ್ಕ .ಎಲ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು,


ಈ ಸಂದರ್ಭದಲ್ಲಿ ಮಹಿಳೆಯರಿಗೆ ಸುರಕ್ಷತೆ, ಪ್ರವಾಸಿಗರ ಸುರಕ್ಷತೆ, ಮಾದಕ ವಸ್ತುಗಳ ಬಗ್ಗೆ ಜಾಗೃತಿ, ಕಾನೂನು ಅರಿವು,ಜನಸ್ನೇಹಿ ಪೊಲೀಸ್ ಠಾಣೆ ಬಗ್ಗೆ ಜಾಗೃತಿಯನ್ನು ಸಾರ್ವಜನಿಕರಿಗೆ ಮೂಡಿಸಲಾಯಿತು,ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ಶಿವಕುಮಾರ ನಾಯ್ಕ ಎಲ್, ASI ವಿರುಪಾಕ್ಷಪ್ಪ, ಸುರೇಶ್, ಆಂಜನಪ್ಪ, ಮೌನೇಶ್, ಮಾರುತಿ, ಉದಯ್ ಕುಮಾರ್ ಇತರ ಪೊಲೀಸ್ ಸಿಬ್ಬಂದಿಗಳು, ಪ್ರವಾಸಿಗರು, ಶಾಲಾ ಮಕ್ಕಳು, ಇತರರು ಉಪಸ್ಥಿತರಿದ್ದರು.



Comments

Couldn’t Load Comments
It looks like there was a technical problem. Try reconnecting or refreshing the page.
bottom of page