top of page

ಹಾಲುಮತ ಮಹಾಸಭಾ ಪಂಜಿನ ಮೆರವಣಿಗೆ ; ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ.

  • Writer: newsnowvijayanagar
    newsnowvijayanagar
  • Jan 27
  • 1 min read



ವಿಜಯನಗರ (ಹೊಸಪೇಟೆ)ಜ,27 : 76ನೇ ಗಣರಾಜ್ಯೋತ್ಸವದ ಅಂಗವಾಗಿ ತ್ಯಾಗ, ಬಲಿದಾನದ ಪ್ರತೀಕ, ಹಾಗು ಪ್ರಪ್ರಥಮ ಸ್ವಾತಂತ್ರ್ಯ ಹೋರಾಟದ ಕಿಡಿ ಸಂಗೊಳ್ಳಿ ರಾಯಣ್ಣರ 194ನೇ ಹುತಾತ್ಮ ದಿನಾಚರಣೆಯನ್ನು ಭಾನುವಾರ ಹಾಲುಮತ ಸಮಾಜ ಭಾಂಧವರು ಪಂಜಿನ ಮೆರವಣಿಗೆ ನಡೆಸಿದರು.

ree

ಹಾಲುಮತಮಹಾಸಭಾದ ಜಿಲ್ಲಾಧ್ಯಕ್ಷ ಕೆ.ರವಿಕುಮಾ ರ ಮಾತನಾಡಿ,ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ಸಂವಿಧಾನ 1950 ಜನವರಿ 26 ರಂದು ಜಾರಿಯಾಯಿತು.ಇಂಥ ವಿಶೇಷ ದಿನದಂದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ದಿನವಾಗಿದೆ. ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನದಂದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅವರು ಹುತಾತ್ಮರಾದ ದಿನದಂದೇ ಭಾರತ ದೇಶಕ್ಕೆ ಸಂವಿಧಾನ ಜಾರಿಯಾಗಿದೆ. ಸಂಗೊಳ್ಳಿ ರಾಯಣ್ಣನಂಥ ಕೆಚ್ಚೆದೆಯ ಬಂಟ, ವೀರ, ಧೀರ ಪ್ರತಿಯೊಂದು ಮನೆಯಲ್ಲಿ ಹುಟ್ಟಲಿ ಎಂದು ಹೇಳಿದರು.

ಹುಡಾ ಮಾಜಿ ಅಧ್ಯಕ್ಷ ಆರ್.ಕೊಟ್ರೇಶ ಮಾತನಾಡಿ, ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ ಅಪ್ರತಿಮ ಹೋರಾಟಗಾರ,ಕೆಚ್ಚೆದೆಯ ಬಂಟ,ಆತನ ಧೈರ್ಯ ಸಾಹಸವನ್ನು ಇಂದಿನ ಪೀಳಿಗೆಯ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬ್ರಿಟೀಷರಿಗೆ ಅಂಜದೇ, ದಿಟ್ಟತನದಿಂದ ಹೋರಾಡಿ, ಕೊನೆಗೆ ವೀರ ಮರಣವನ್ನು ಅಪ್ಪಿದ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನದಂದೇ ಗಣರಾಜ್ಯವಾಗಿರುವುದೇ ವಿಶೇಷ ಎಂದರು.ಬಳಿಕ ನಗರದ ಅಭಯ ಆಂಜನೇಯ ವೃತ್ತದಿಂದ ಸಂಗೊಳ್ಳಿ ರಾಯಣ್ಣನ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು.


ಈ ಸಂಧರ್ಭದಲ್ಲಿ ಮುಖಂಡರಾದ ರಾಮಚಂದ್ರಗೌಡ, ವಕೀಲ ಎಚ್.ಮಹೇಶ, ಉಪನ್ಯಾಸಕ ಮಲ್ಲಿಕಾರ್ಜುನ, ಆರ್.ಕೆ.ಕೊಟ್ರೇಶ, ಬಲ್ಲೂರಪ್ಪ, ಬಿಸಾಟಿ ತಾಯಪ್ಪ, ಬೇಕರಿ ವೆಂಕಟೇಶ, ಶ್ರೀಕಾಂತ, ಬಂದಿ ಚಿಂತಾಮಣಿ ಸೇರಿದಂತೆ ಇತರರು ಇದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page