top of page

ಜಿಲ್ಲಾ ಮಟ್ಟದ ಗೃಹರಕ್ಷಕರ ಉತ್ಥಾನ ದಿನಾಚರಣೆಯಲ್ಲಿ ಎಸ್ಪಿ ಹೇಳಿಕೆ. ಖಾಕಿ ತೊಟ್ಟ ಮೇಲೆ ಪೊಲೀಸ್ _ಗೃಹರಕ್ಷಕ ಭೇಧ ಭಾವ ಬೇಡ : ಶ್ರೀಹರಿಬಾಬು.

  • Writer: newsnowvijayanagar
    newsnowvijayanagar
  • Dec 12, 2024
  • 1 min read

ಹೊಸಪೇಟೆ : ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿಜಿಲ್ಲಾ ಮಟ್ಟದ ಗೃಹರಕ್ಷಕರ ಉತ್ಥಾನ ದಿನಾಚರಣೆ ನಡೆಯಿತು.ಮುಖ್ಯ ಅತಿಥಿಗಳಾಗಿ ವಿಜಯನಗರ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಮಾತನಾಡಿಖಾಕಿ ತೊಟ್ಟ ಮೇಲೆ ಪೊಲೀಸ್ - ಹೋಂ ಗಾರ್ಡ್ ಅಂತ ಬೇಧ ಭಾವ ಬೇಡ. ಗೃಹರಕ್ಷಕರು ಪೊಲೀಸ್ ಇಲಾಖೆಗೆ ಬೆನ್ನೆಲುಬಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಇಲಾಖೆಗೆ ಹೆಗಲಿಗೆ ಹೆಗಲು ಕೊಟ್ಟು ಪ್ರಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.


ಸಹಾಯಕ ಆಯುಕ್ತ ಪಿ. ವಿವೇಕಾನಂದ ಮಾತನಾಡಿ, ಪೊಲೀಸರಿಗೆ ಹೋಲಿಸಿದರೆ ಗೃಹರಕ್ಷಕರಿಗೆ ಯಾವುದೇ ಸೌಲಭ್ಯ ಇಲ್ಲ ಆದರೂ ನಿಮ್ಮ ನಿಸ್ವಾರ್ಥ ಸೇವೆಯು ಮೆಚ್ಚುವಂಥದ್ದು. ಎಂದರು.ಜಿಲ್ಲಾ ಬೋಧಕರಾದ ಪ್ರಶಾಂತ್ ಪಾಟೀಲ್ ಮಾತನಾಡಿ, ಹಬ್ಬ ಹರಿ- ದಿನ, ಚುನಾವಣೆ ಬಂದೋಬಸ್ತ್ ಕರ್ತವ್ಯದಲ್ಲಿ ಹಾಗೂ ಇನ್ನಿತರ ಸಂದರ್ಭದಲ್ಲಿ ಗೃಹರಕ್ಷಕರ ಸೇವೆ ಮರೆಯುವಂತಿಲ್ಲ ಎಂದು ಹೇಳಿದರು. ಬಳಿಕ ವರ್ಷದ ವಾರ್ಷಿಕ ವರದಿಯನ್ನು ಓದಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಮಾದೇಷ್ಟಾಧಿಕಾರಿ ಬಸವರಾಜ ಅಗಸರ ಮಾತನಾಡಿ, ಆರೋಗ್ಯ ಇಲಾಖೆಗೆ ಇನ್ನೂ ಹೆಚ್ಚಿನ ಭದ್ರತೆಯನ್ನು ಒದಗಿಸಲು ಗೃಹರಕ್ಷಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಮಂಜೂರಾತಿಯನ್ನು ಕೋರುತ್ತೇನೆ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಮಂಜುರಾತಿ ಇರುವುದರ ಕಾರಣ ಸರದಿ ಆಧಾರದಲ್ಲಿ ಕರ್ತವ್ಯ ನೀಡಲು ಗೃಹರಕ್ಷಕ ದಳದ ಅಧಿಕಾರಿಗಳಿಗೆ ಸೂಚಿಸಿದರು.


ಇದೇ ಸಂದರ್ಭದಲ್ಲಿ ಗೃಹ ರಕ್ಷಕ ದಳ ಇಲಾಖೆಯಲ್ಲಿ ಮೂವತ್ಮೂರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳಾದ ಶಂಕರ್ ರಾವ್ ಹಾಗೂ ನಾಗರಾಜ್ ಮಲ್ಕಿ ಒಡೆಯರ್ ರವರಿಗೆ ಸನ್ಮಾನಿಸಿದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಇದೇ ವರ್ಷದಲ್ಲಿ ನಿಧನ ಹೊಂದಿದ ಬಿ ಗೌಸ್ ಹಾಗೂ ಗುರು ಬಸವರಾಜ ರವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಕಾಲ ಮೌನಚರಣೆ ಮಾಡಲಾಯಿತು.


ಈ ವೇಳೆ ಜಿಲ್ಲಾ ಪ್ರಶಸ್ತಿಗಳನ್ನು ನೀಡಲಾಯಿತು. ಜಿಲ್ಲಾ ಅತ್ಯುತ್ತಮ ಘಟಕಾಧಿಕಾರಿ ರಾಜ್ ಪೀರ್ , ಜಿಲ್ಲಾ ಅತ್ಯುತ್ತಮ ಘಟಕ ಹಗರಿಬೊಮ್ಮನಹಳ್ಳಿ , ಜಿಲ್ಲಾ ಅತ್ಯುತ್ತಮ ಗೃಹರಕ್ಷಕ ಪಿ ಭಾಷಾ ಸಾಹೇಬ್ , ಬಿ ಚಂದ್ರಪ್ಪ ಜಿಲ್ಲಾ ಅತ್ಯುತ್ತಮ ಗೃಹರಕ್ಷಕಿ ಹಸೀನಬಾನು ಪ್ರಶಸ್ತಿಗಳನ್ನು ಪಡೆದರು.

ಗಿರೀಶ್ ಎಸ್.ಎಂ ಘಟಕಾಧಿಕಾರಿಗಳು ಸ್ವಾಗತಿಸಿದರು ಎಲ್ ವಲ್ಯ ನಾಯ್ಕ್ ಹಾಗೂ ಬಿ ಪರಶುರಾಮ್ ಕಾರ್ಯಕ್ರಮವನ್ನು ನಿರೂಪಿಸಿದರು



ಈ ಸಂದರ್ಭದಲ್ಲಿ ಘಟಕಾಧಿಕಾರಿಗಳಾದ ಮಲ್ಲಿಕಾರ್ಜುನ ,ಶಂಕರ್ ನಾಯ್ಕ್, ಗುರುಬಸವರಾಜ್ , ಜೆ ಎಂ ಬಾಷಾ , ನರಿ ವಿರೂಪಾಕ್ಷಿ , ಅನ್ವರ್ ಭಾಷಾ , ಮಲ್ಲಿಕಾರ್ಜುನ ಸ್ವಾಮಿ, ಪೂಜಾರ್ ವಾಗೇಶ್ , ಉದಯ ಚಂದ್ರ ಎಂ , ಸಂತೋಷ್ ಸಿ. ಹಾಗೂ ಗೃಹರಕ್ಷಕ ಗೃಹರಕ್ಷಕೀಯರು ಇದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

留言


bottom of page