top of page

ಉನ್ನತ ಸ್ಥಾನ ಸಿಗಲು ಸಮಾಜದಲ್ಲಿ ಒಗ್ಗಟ್ಟು ಅಗತ್ಯ

  • Writer: newsnowvijayanagar
    newsnowvijayanagar
  • Mar 10
  • 1 min read

ವಿಜಯನಗರ (ಹೊಸಪೇಟೆ) ನಗರದ ಹಂಪಿ ರಸ್ತೆಯಲ್ಲಿ ಇರುವ ತಾಲೂಕು ಕುರುಬರ ಸಂಘದಲ್ಲಿ ಕುರುಬ ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರಿಗೆ ಸನ್ಮಾನ ಕಾರ್ಯಕ್ರಮ ಎರ್ಪಡಿಸಲಾಗಿತ್ತು. ಹೊಸಪೇಟೆ ತಾಲೂಕು   ಅಹಿಂದ   ಯುವ ವೇದಿಕೆಯ ಅಧ್ಯಕ್ಷ ಕುಬೇರ ದಲ್ಲಾಲಿ ತಂದೆ–ತಾಯಿ ಮಕ್ಕಳನ್ನು ಆಸ್ತಿಗಷ್ಟೇ ವಾರಸುದಾರರನ್ನಾಗಿ ಮಾಡುವ ಬದಲಿಗೆ, ದೇಶದ ಆಸ್ತಿಯನ್ನಾಗಿ ರೂಪಿಸಬೇಕು’ ಎಂದು ಅಭಿಪ್ರಾಯಪಟ್ಟರು.


‘ಪೋಷಕರು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡಬೇಕೇ ಹೊರತು, ಜೀವನ ಪರ್ಯಂತ ಅವರಿಗೆ ಆಸರೆಯಾಗಿ ಇರಬಾರದು. ಮಕ್ಕಳು ತಮ್ಮ ಕಾಲಿನ ಮೇಲೆ ತಾವೇ ನಿಲ್ಲುವಂತೆ ಮಾಡಬೇಕು. ಆಗ ಅವರು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.  ತಮ್ಮ ಸಾಮರ್ಥ್ಯವನ್ನು ಅಸ್ತ್ರವಾಗಿಸಿಕೊಂಡಾಗ ಮಾತ್ರ ಅವಕಾಶಗಳು ದೊರೆಯುತ್ತವೆ’ ಎಂದು ಹೇಳಿದರು. 


ree

ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಹೊರ ಬಂದು ಸೇವಾ ಮನೋಭಾವವನ್ನು  ಬೆಳೆಸಿ ಕೊಳ್ಳುತ್ತಾ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ಲಭಿಸುತ್ತವೆ.  ವಿಶ್ವನಾಥ್ ಅವರು ಬಡ ವಿದ್ಯಾರ್ಥಿಗಳಿಗೆ ನೋಟ ಬುಕ್ಕ ಮತ್ತು ಫೀಸು ಗಳನ್ನು ಯಾವುದೇ ಜಾತಿ, ಧರ್ಮ ಎನ್ನದೆ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ವೆಂಕಟೇಶ್ ರವರು 100 ಹಾಸಿಗೆ ಆಸ್ಪತ್ರೆಯಲ್ಲಿ ಜಾತಿ ಧರ್ಮ ಎನ್ನದೆ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಸೇವಾ ಮನೋಭಾವ ಹೊಂದಿದವರಿಗೆ ಯಾವುದೇ ಜಾತಿ, ಧರ್ಮ ಅಡ್ಡಿ ಬರು ವುದಿಲ್ಲ ಮನುಷ್ಯ ಸಮಾಜಮುಖಿಯಾಗಿ ಇದ್ದಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ.‘ವಿದ್ಯೆ ಎನ್ನುವುದು ಒಂದು ಉತ್ತಮ ಆಯುಧ. ಹೀಗಾಗಿ, ವಿದ್ಯಾವಂತರನ್ನು ಇಡೀ ಪ್ರಪಂಚ ಗೌರವಿಸುತ್ತದೆ’ ಎಂದು ಹೇಳಿದರು.


ಕುರುಬ ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರಿಗೆ ಸನ್ಮಾನಿಸಲಾಯಿತು. ಟಿ. ವಿಶ್ವನಾಥ್. ಶಿವಮೂರ್ತಿ, ಆರ್. ಮಂಜುನಾಥ್. ಸಾಲಿ. ವೆಂಕಟೇಶ್. ದಾಸ್ನಾಳ ಹುಲುಗಪ್ಪ. ಇವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮ ಕುರಿತು ವಿಶ್ವನಾಥ್ ಅವರು ಮಾತನಾಡಿ. ಈ ಕಾರ್ಯಕ್ರಮ ಆಯೋಜನೆ ಮಾಡಿದಂತಹ ಬಂದಿ ಚಿಂತಾಮಣಿ. ಹಾಗೂ ಶಶಿಕುಮಾರ್. ಮತ್ತು ಗಂಟೆ ಉಮೇಶ್. ದಮ್ಮೂರ್ ಮಂಜುನಾಥ್ ಅವರಿಗೂ ಹೃದಯಪೂರ್ವಕವಾಗಿ . ಅಭಿನಂದನೆ ಹೇಳಿದರು.

ಈ ಕಾರ್ಯಕ್ರಮದ ನಿರೂಪಣೆ ಬಣಕಾರ್ ಗೌರೀಶ್ ನೆರವೇರಿಸಿದರು.


ಈ ಸಂದರ್ಭದಲ್ಲಿ ಕುರುಬ ಸಮಾಜದ ಹಿರಿಯರು ಮತ್ತು ಯುವಕರು ಹಾಗೂ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು. ಹಾಗೂ ಇನ್ನಿತರರು ಇದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page