top of page

ನಗರಕ್ಕೆ ನಾಲ್ಕು ಕಡೆ ಟ್ರಾಫಿಕ್ ಸಿಗ್ನಲ್.

  • Writer: newsnowvijayanagar
    newsnowvijayanagar
  • Dec 9, 2024
  • 1 min read

ಸಾರ್ವಜನಿಕ ಸಭೆಯಲ್ಲಿ ಎಸ್ಪಿ ಶ್ರೀಹರಿಬಾಬು ಹೇಳಿಕೆ.

ನಗರಕ್ಕೆ ನಾಲ್ಕು ಕಡೆ ಟ್ರಾಫಿಕ್ ಸಿಗ್ನಲ್.

ಹೊಸಪೇಟೆ : ವಿಶ್ವ ಪರಂಪರೆ ತಾಣ ವೀಕ್ಷಿಸಲು ಜಗತ್ತಿನ ಎಲ್ಲ ಕಡೆಯ ಜನರು ಹೊಸಪೇಟೆಗೆ ಬರುತ್ತಿರುವುದರಿಂದ ನಗರದಲ್ಲಿ ಸಂಚಾರ ಮತ್ತು ಬೀದಿ ಬದಿ ವ್ಯಾಪಾರದಲ್ಲಿ ಶಿಸ್ತು ಕಾಯ್ದುಕೊಳ್ಳುವ ಉದ್ದೇಶದಿಂದ ನಾಲ್ಕು ಕಡೆ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಹಾಗು ರಸ್ತೆಗಳಿಗೆ ವಿಭಜಕಗಳು ಬರಲಿವೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ತಿಳಿಸಿದರು.


ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.ಹೊಸಪೇಟೆ ನಗರ ವಿಸ್ತರಣೆಗೆ ಹೆಚ್ಚು ಸ್ಥಳವಕಾಶವಿಲ್ಲದ ಕಾರಣ ಇರೋ ಜಾಗವನ್ನೇ ಸಮರ್ಪಕವಾಗಿ ಬಳಸಿಕೊಂಡು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತೇವೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.


ಬೀದಿ ಬದಿ ವ್ಯಾಪಾರಿಗಳಿಗೆ ಒಂದು ನಿರ್ದಿಷ್ಟ ಜಾಗ ಗುರುತಿಸುವ ಕೆಲಸ ಮಾಡಲಾಗುವುದು. ಅಂಗಡಿಗಳಿಗೆ ಸಾಮಾಗ್ರಿ ಇಳಿಸಿಕೊಳ್ಳುವವರು ಬೆಳಿಗ್ಗೆ 9 ಗಂಟೆ ಮೊದಲು, ನಂತರ 1 ರಿಂದ 4 ಗಂಟೆಯ ಒಳಗೆ ಈ ಕೆಲಸ ಮಾಡಿದರೆ ಟ್ರಾಫಿಕ್ ಸಮಸ್ಯೆಯಾಗುವುದಿಲ್ಲ.ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನಗಳಿಗೆ ಪಾರ್ಕಿಂಗ್ ಗಾಗಿ ಒಂದು ನಿರ್ದಿಷ್ಟ ಸ್ಥಳವನ್ನು ಗುರುತಿಸುವ ಕೆಲಸ ಕೆಲವು ರಸ್ತೆಗಳಲ್ಲಿ ಆಗಲಿದೆ ಎಂದು ಹೇಳಿದರು.


ಅಪ್ರಾಪ್ತರು ಕಾಲೇಜುಗಳಿಗೆ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ವಿಷಯದಲ್ಲಿ 26 ಪ್ರಕರಣಗಳು ದಾಖಲಾಗಿ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.. ಈ ವಿಚಾರದಲ್ಲಿ ಪೋಷಕರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಪೋಷಕರು ಅಪ್ರಾಪ್ತ ವಯಸ್ಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಬಾರದು. ಗುರುವಾರದಿಂದ ನಗರದ ಸ್ವಾಗಿ ಮಾರ್ಕೆಟ್ ಮತ್ತು ರೈಲು ನಿಲ್ದಾಣ ಪ್ರದೇಶದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.


ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಲ್ಲಿ ಕೆಲವರು ನಾಲ್ಕೈದು ಕಡೆ ಅಂಗಡಿಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಗಮನಕ್ಕೆ ಬಂದಿದ್ದು, ಒಂದು ರೇಷನ್ ಕಾರ್ಡಿಗೆ ಒಬ್ಬರಿಗೆ ಮಾತ್ರ ಅಂಗಡಿ ಇಡುವ ಅವಕಾಶ ನೀಡಬೇಕು ಎನ್ನುವ ಚಿಂತನೆ ಇದೆ. ಇದರಿಂದ ಇತರರಿಗೂ ಅವಕಾಶ ನೀಡಿದಂತಾಗುತ್ತದೆ ಎಂದರು.


ವಿವಿಧ ಸಂಘ ಸಂಸ್ಥೆಗಳು ಮುಖಂಡರು,ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಕುರಿತು,ಮತ್ತು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹಿಂದಿನ ಬಾಲಕೀಯರ ಪ್ರೌಢಶಾಲೆಯ ಸುತ್ತಮುತ್ತ,ದೊಡ್ಡ ಮಸೀದಿಯ ಹಿಂಭಾಗದಲ್ಲಿ ಬೀದಿ ಬದಿ ವ್ಯಾಪಾರಿ ನಡೆಸಲು ಅವಕಾಶ ಕಲ್ಪಿಸಲಾಗುವುದು. ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.



ಈ ಸಂಧರ್ಭದಲ್ಲಿ ಡಿವೈಎಸ್ಪಿ ಟಿ.ಮಂಜುನಾಥ, ಟ್ರಾಫಿಕ್ ಪಿಐ ಡಿ.ಹುಲುಗಪ್ಪ, ಪಟ್ಟಣ ಠಾಣೆಯ ಪಿಐ ಲಖನ್ ಆರ್.ಮಸಗುಪ್ಪಿ ಸೇರಿದಂತೆ ಇತರರು ಇದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page