top of page

ಇಂಡಿಪೆಂಡೆಂಟ್ ಪಿಯು ಕಾಲೇಜು,ಗಮನ ಸೆಳೆದ ಆಹಾರ ಮೇಳ

  • Writer: newsnowvijayanagar
    newsnowvijayanagar
  • Dec 9, 2024
  • 1 min read

ವಿಜಯನಗರ(ಹೊಸಪೇಟೆ): ನಗರದ ಇಂಡಿಪೆಂಡೆಂಟ್ ಪಿಯು ಕಾಲೇಜ್ ನಲ್ಲಿ ಆಹಾರ ಮೇಳಕ್ಕೆ ಚಾಲನೆ ನೀಡಿದ ವಿ ವಿ ಸಂಘದ ಇಂಡಿಪೆಂಡೆಂಟ್ ಪಿಯು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷರು ಮಲ್ಲಿಕಾರ್ಜುನ್ ಮೆಟ್ರಿ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಆಹಾರದ ಪ್ರಾಮುಖ್ಯತೆ, ವ್ಯವಹಾರಿಕ ಜ್ಞಾನ, ಸಂಘಟನಾ ಶಕ್ತಿ,ಜವಾಬ್ದಾರಿ, ಕೂಡಿ ಬಾಳುವಿಕೆ, ಸೃಜನಾತ್ಮಾಕತೆ,ಆರ್ಥಿಕ ಜ್ಞಾನ, ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಇಂತಹ ಆಹಾರ ಮೇಳಗಳು ಸಹಕಾರಿ ಯಾಗಲಿವೆ ಎಂದು ಹೇಳಿದರು.


ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಪದಾರ್ಥಗಳನ್ನು ತಯಾರಿಸಿ ಬಗೆ ಬಗೆಯ ತಿನಿಸುಗಳ ಮಾರಾಟದಲ್ಲಿ ಉತ್ಸಾಹದಿಂದ ತಲ್ಲೀನರಾಗಿರುವುದು ಕಂಡು ಬಂದಿತು.ತಮ್ಮ ಸ್ನೇಹಿತರು ಹಾಗೂ ನೆರೆಹೊರೆಯವರೊಂದಿಗೆ ತಂಡೋಪತಂಡವಾಗಿ ಆಗಮಿಸಿ ವಿವಿಧ ತಿಂಡಿಗಳನ್ನು ಖರೀದಿಸಿ ಸವಿಯುವ ಮೂಲಕ ಪ್ರೋತ್ಸಾಹದ ಮಾತುಗಳನ್ನಾಡಿದರು.ಆಹಾರ ಮೇಳ ಮನಸೂರೆಗೊಂಡಿತು.


ವಿಶಾಲವಾದ ಕಾಲೇಜು ಆವರಣದಲ್ಲಿ ತಾತ್ಕಾಲಿಕ 12 ಮಳಿಗೆಗಳಲ್ಲಿ ವಿದ್ಯಾರ್ಥಿಗಳು ತಯಾರಿಸಿದ 50ಕ್ಕೂ ಹೆಚ್ಚು ತಿನಿಸುಗಳನ್ನು ಮಾರಾಟ ಮಾಡಿದರು ,ಫ್ರೂಟ್ ಸಲಾಡ್, ಪಾನಿಪುರಿ, ಚನ್ನಾ ಮಸಾಲಾ, ಮಸಾಲಾ ಪಾಪಡ್ ಸೇರಿದಂತೆ ವಿವಿಧ ತಿನಿಸು, ಪಾನೀಯಗಳನ್ನು ಸವಿದ ಜನರು ವಿದ್ಯಾರ್ಥಿಗಳ ಉತ್ಸಾಹ ,ಅವರು ತಯಾರಿಸಿದ ತಿನಿಸುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿ ವಿಯುಐಎಸ್ಎಸ್ ಐಡಿಪಿಯು ಕಾಲೇಜು ಸದಸ್ಯರು, ವಿಜಯಕುಮಾರ್, ಜಿ.ಬಿ, ಮಹೇಶ್ ಗೌಡ, ಜೆ.ಎಂ ಪ್ರಭಾಕರ. ಸಿಕಂದರ್ ಬಾಷಾ ಎಚ್‌ಓಡಿ, ಹಾಗೂ ಉಪನ್ಯಾಸಕರಾದ .ಮಂಜುಳಾ.ಜಿ,ವಿದ್ಯಾಶ್ರೀ.ಎಸ್, ಪ್ರಾಂಶುಪಾಲರು ಡಾ.ಹನುಮಂತಗೌಡ‌.ಜಿ, ನ್ಯಾಯಾಧೀಶರಾಗಿ ಆಹಾರ ಗುಣಮಟ್ಟದ ಪರಿವೀಕ್ಷಣೆ ಮಾಡಿದರು.



ಎಚ್.ಓ.ಡಿ.ವಿಕ್ರಮ್.ಕೆ ಮತ್ತು ಕಾಲೇಜು ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page