top of page

ಸಮುದಾಯಗಳ ಏಳಿಗೆಗಾಗಿ ಒಳ ಮೀಸಲಾತಿ ಬೇಕು; ಸೋಮಶೇಖರ್ ಬಣ್ಣದಮನೆ

  • Writer: newsnowvijayanagar
    newsnowvijayanagar
  • Apr 12
  • 1 min read

ವಿಜಯನಗರ(ಹೊಸಪೇಟೆ)ಏ,12:ಅಮರಾವತಿ ಪ್ರವಾಸಿ ಮಂದಿರದಲ್ಲಿ ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ,ಸಭೆ ಅಯೋಜಿಸಲಾಗಿತ್ತುತುಳಿತಕ್ಕೊಳಗಾದ ಸಮುದಾಯಗಳ ಏಳಿಗೆಗಾಗಿ ಒಳ ಮೀಸಲಾತಿ ಬೇಕು. ರಾಜ್ಯ ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸದೆ ಪರಿಶಿಷ್ಟರ ಜಾತಿ ಗಣತಿ ಮಾಡಿ ಯಾರಿಗೂ ಯಾವ ಸಮುದಾಯಕ್ಕೂ ಅನ್ಯಾಯ ಮಾಡದೆ ಗಣತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸೋಮಶೇಖರ್ ಬಣ್ಣದ ಮನೆ ತಿಳಿಸಿದರು .


ree

ಈ ಸಭೆಯಲ್ಲಿ ಪ್ರಮುಖವಾಗಿ ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗವು ಮನೆ ಮನೆ ಬೇಟಿ ನೀಡಿ ಜಾತಿ ಜನಗಣತಿ ಮಾಡುವ ಸಂಧರ್ಭದಲ್ಲಿ ಪ್ರತಿ ಗ್ರಾಮದಲ್ಲಿರುವ ಛಲವಾದಿ ಸಮುದಾಯಗಳ ಜನರಿಗೆ ಅರಿವು ಮೂಡಿಸಿ ಜಾತಿ ಕಲಂ ನಲ್ಲಿ ಛಲವಾದಿ ಅಥವಾ ಹೊಲೆಯ ಎಂದು ನಮೂದಿಸಬೇಕೆಂದು ತಿಳಿಸಲಾಯಿತು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನ ಎಲ್ಲಾ ತಾಲೂಕು, ಹೋಬಳಿ ಮತ್ತು ಗ್ರಾಮಗಳಲ್ಲಿ ವಿಜೃಂಭಣೆಯಿಂದ ಆಚರಿಸಲು ಹಾಗೂ ಮುಂದಿನ ತಿಂಗಳು ಜಿಲ್ಲಾ ಮಟ್ಟದಲ್ಲಿ ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಸಮುದಾಯಗಳನ್ನು ಒಳ ಗೂಡಿಸಿಕೊಂಡು ಅತ್ಯಂತ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸುವ ಕುರಿತು ಮತ್ತು ದಲಿತರು ಗ್ರಾಮಗಳಲ್ಲಿ ಅನುಭವಿಸುವ ಸಮಸ್ಯೆಗಳ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಭೆಗೆ ತಾಲೂಕಿನ ಪ್ರಮುಖ ಮುಖಂಡರು ಹಿರಿಯರದ ಗುಂಡಗತ್ತಿ ಕೊಟ್ರಪ್ಪ,ಜಿಲ್ಲಾ ಖಜಾಂಚಿಗಳಾದ ಜೆಸಿ ಈರಣ್ಣ, ಸಣ್ಣ ಈರಪ್ಪ,ರಾಮಚಂದ್ರ ಬಾಬು,ಮರಿಸ್ವಾಮಿ,ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಮಾರಪ್ಪ,ನಿವೃತ್ತ ಶಿಕ್ಷಕರಾದ ಚಂದ್ರಶೇಖರ,ಪ್ರಭಾಕರ್, ಛಲವಾದಿ ಕೇರಿ ಮುಖಂಡರಾದ ಮುದುಕಪ್ಪ, ರಾಮಕೃಷ್ಣ,ಟಿ ಬಿ ಡ್ಯಾಮ್ ರಮೇಶ್,ಶಿಕ್ಷಕರಾದ ಸುಗ್ಗನಳ್ಳಿ ರಮೇಶ್,ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ್,ಹರಪನಹಳ್ಳಿಯಸಿ.ಅಜ್ಜಯ,ಕೊಟ್ರೇಶ್,ಹಗರಿ ಬೊಮ್ಮನಹಳ್ಳಿಯ ಪ್ರಕಾಶ್,ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್ ಹಾಗೂ ಮುಂತಾದವರು ಉಪಸ್ಥಿತರಿದ್ದರು

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page