top of page

ಏ.7 ರಂದು ಕೆಕೆಎಸ್‌ಆರ್‌ಟಿಸಿ ಪೋನ್ ಇನ್ ಕಾರ್ಯಕ್ರಮ.

  • Writer: newsnowvijayanagar
    newsnowvijayanagar
  • Apr 4
  • 1 min read

ಹೊಸಪೇಟೆ ಏಪ್ರಿಲ್.4 : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ(ಕೆ.ಕೆ.ಎಸ್.ಆರ್.ಟಿ.ಸಿ) ಹೊಸಪೇಟೆ ವಿಭಾಗದಿಂದ ಸಮರ್ಪಕ ಬಸ್ ಸಂಚಾರ ಕುರಿತು ಪೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಪ್ರಯಾಣಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಾರಿಗೆ ಬಸ್‌ಗಳ ಸಂಚಾರದಲ್ಲಿ ಉಂಟಾಗುತ್ತಿರುವ ಕುಂದು ಕೊರತೆ ಹಾಗೂ ಸಮಸ್ಯೆಗಳ ಕುರಿತು ಏಪ್ರಿಲ್.7 ರಂದು ಮಧ್ಯಾಹ್ನ 3:30 ರಿಂದ 4:30 ವರೆಗೆ ದೂರವಾಣಿ ಸಂಖ್ಯೆಗಳಾದ 7760992314, 7760992317 ಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಬಹುದು. ಈ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ದೊರಕಿಸಿ ಕೊಡುವುದಾಗಿ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comentarios


bottom of page