top of page

ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್, 68ನೇ ಮಹಾಪರಿನಿಬ್ಬಾಣ

  • Writer: newsnowvijayanagar
    newsnowvijayanagar
  • Dec 9, 2024
  • 1 min read

ವಿಜಯನಗರ(ಹೊಸಪೇಟೆ): ಬಾಬಾಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾಪರಿನಿಬ್ಬಾಣ ಕಾರ್ಯಕ್ರಮವನ್ನು ಜೈ ಭೀಮ್ ವೃತ್ತದಲ್ಲಿ ಭೀಮ ಗಾನ ನಮನ ವಿಶಿಷ್ಟ ಕಾರ್ಯಕ್ರಮದ ಮೂಲಕ ಹಮ್ಮಿಕೊಳ್ಳಲಾಗಿತ್ತು.


ಹೊಸ ಪ್ರತಿಭೆಗಳಿಗೆ ಭೀಮ ಗಾಯನದ ಅವಕಾಶವನ್ನು ಒದಗಿಸಿ ಕೊಡಲಾಗಿತ್ತು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎನ್. ಚಿನ್ನಸ್ವಾಮಿ ಸೋಸಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕವಿಗಳು ಮತ್ತು ಬರಹಗಾರರಾಗಿರುವ ಪಿರ್ ಬಾಷಾ,ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಹಿರಿಯ ಸಾಹಿತಿ ರೆಹಮತ್ ತರೀಕೆರೆ,ಪ್ರಗತಿಪರ ಚಿಂತಕರಾದ ಶೇಖರ್.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನ ಮುಟ್ಟುವಂತೆ ವಿವರಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಮಾತ್ರ ಮೀಸಲಿಲ್ಲ ಅವರು ಇಡೀ ವಿಶ್ವದ ಎಲ್ಲಾ ಮನುಕುಲದ ನಾಯಕರು ಎಂದು ಪ್ರತಿಪಾದಿಸಿದರು,


ಮರಿಯಮನಹಳ್ಳಿಯ ತಮಟೆ ವಾದ್ಯಕರಾದ ಮಹಾಂತೇಶ್ ಅವರ ತಂಡವು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು,ರಂಜಿನಿ ಆರ್ತಿ, ಎಲ್ಲಪ್ಪ ಬಂಡಾರದಾರ್, ಕನ್ನಡ ವಿಶ್ವವಿದ್ಯಾಲಯದ ರವಿಚಂದ್ರನ್ ಭೀಮ ಗೀತೆಗಳನ್ನು ಸುಂದರವಾಗಿ ಹಾಡಿದರು. ಸೋಮಶೇಖರ್ ಬಣ್ಣದ ಮನೆ ನಿರ್ವಹಣೆ ಮಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.



ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯ ಸಂಘಟನೆಯ ರಾಜ್ಯಾಧ್ಯಕ್ಷ ಸಣ್ಣ ಮಾರಪ್ಪ, ವಿಜಯನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ,ಸೇವದಳ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎರ್ರಿಸ್ವಾಮಿ,ಜೈ ಭೀಮ್ ವಿದ್ಯಾರ್ಥಿ ಯುವಜನ ಸಂಘಟನೆಯ ಜಿಲ್ಲಾ ಅಧ್ಯಕ್ಷ ಜೈ ಶಿವಕುಮಾರ್, ಛಲವಾದಿ ಮಹಾಸಭಾ ಜಿಲ್ಲಾ ಖಜಾಂಚಿ ಜೆ.ಸಿ ಈರಣ್ಣ, ಸ್ಲಂ ಜನರ ಸಂಘಟನೆಯ ಅಧ್ಯಕ್ಷ ನೀರಳ್ಳಿ ವೆಂಕಟೇಶ್, ಹಜರತ್ ಟಿಪ್ಪು ಸುಲ್ತಾನ್ ಸಂಘಟನೆಯ ಅಧ್ಯಕ್ಷ ರೆಹಮಾನ್, ಉಪಾಧ್ಯಕ್ಷ ನೂರಾಹಮದ್, ಮುದುಕಪ್ಪ, ನಜೀರ್ ಅಹ್ಮದ್, ಸಜಾತ್ ಖಾನ್, ಶಬ್ಬೀರ್ ಅಹ್ಮದ್,ರಫೀಕ್, ಇಂತಿಯಾಜ್,ಪ್ರಕಾಶ್, ಓಬಳೇಶ್,ಚಂದ್ರಶೇಖರ, ಪ್ರಕಾಶ್ ಛಲವಾದಿಕೇರಿ, ನವೀನ್ ಕುಮಾರ್, ಮುಂತಾದವರು,ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

ความคิดเห็น


bottom of page