top of page

ಶ್ರೀ ಹಗರಿಲಿಂಗೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು

  • Writer: newsnowvijayanagar
    newsnowvijayanagar
  • 2 days ago
  • 1 min read

ಹೊಸಪೇಟೆ : ತಾಲೂಕಿನ ಕಾಕುಬಾಳು ಗ್ರಾಮದಲ್ಲಿ ಶ್ರೀ ಹಗರಿ ಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಶ್ರೀ ಹಗರಿಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಹುಡಾ ಅಧ್ಯಕ್ಷ ಹಾಗು ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್. ಎನ್ ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ, ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಹಗರಿ ಲಿಂಗೇಶ್ವರ ದೇವಸ್ಥಾನದ ಉಧ್ಘಾಟನೆ, ಹಾಗು ಶಿಲಾಮೂರ್ತಿ ಪ್ರತಿಷ್ಠಾಪನೆ ಈ ಸುಸಂದರ್ಭದಲ್ಲಿ ನೂತನವಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವ ವಧು ವರರು ಈ ರೀತಿ ಸಾಮೂಹಿಕವಾಗಿ ನಡೆಯುವ ವಿವಾಹಗಳಲ್ಲಿ ಮದುವೆಯಾಗುವುದರಿಂದ ಎಲ್ಲರ ಶುಭಾಶಿರ್ವಾದಗಳು ದೊರೆಯುತ್ತವೆ. ತಂದೆ ತಾಯಿಯರಿಗೆ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ. ಇಲ್ಲದಿದ್ದರೆ ಮನೆಗಳನ್ನು ಅಥವಾ ಹೊಲಗಳನ್ನು ಮಾರಿ ಮದುವೆ ಮಾಡಬೇಕಾದ ದುಸ್ಥಿತಿ ಎದುರಾಗುತ್ತದೆ. ಹಾಗು ನವ ದಂಪತಿಗಳು ಪ್ರೀತಿ ಪ್ರೇಮ-ವಾತ್ಸಲ್ಯ, ನಂಬಿಕೆ-ವಿಶ್ವಾಸ ಭಯ-ಭಕ್ತಿ, ಸಹನೆ- ಸೌಹಾರ್ದತೆ ಮೂಲಕ ಬಾಳಿ ತಂದೆ ತಾಯಿಗಳಿಗೆ, ಅತ್ತೆ, ಮಾವನವರಿಗೆ ಗುರು ಹಿರಿಯರುಗಳಿಗೆ ಗೌರವ ತರಬೇಕೆಂದು ತಿಳಿಸಿದರು. ಇದೇ ವೇಳೆ 6 ನೂತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ಸಂಧರ್ಭದಲ್ಲಿ ಜಡೆಶಿವಯೋಗಾಶ್ರಮ ಮಠದ ಷಡಕ್ಷರಿ ಸ್ವಾಮಿಗಳು, ಹಿರಿಯ ಮುಖಂಡರಾದ ದೀಪಕಸಿಂಗ್, ಶ್ರೀಮತಿ ರಶ್ಮಿ ರಾಜಶೇಖರ ಹಿಟ್ನಾಳ್, ಎಲ್.ಸಿದ್ದನಗೌಡ, ಬಿ.ಕೆ.ಅನಂತಕುಮಾರ್, ವೈ.ಎರಿಸ್ವಾಮಿ, ವೈ.ಸುಭಾಷ್, ಎಣ್ಣೆಗಾದೆಪ್ಪನವರ ರುದ್ರಪ್ಪ, ಬತ್ತಿ ಹನುಮಪ್ಪ, ಸಿ.ರಾಮಲ್ಲಿ, ಮಹಾಂಕಾಳಿ ಅಂಬರೀಷ, ಸೊಂಟಿ ಶಂಕ್ರಪ್ಪ, ಸೇರಿದಂತೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಇದ್ದರು.

Recent Posts

See All

Comments


bottom of page