top of page

ಮನುಸ್ಮೃತಿ ದಹನ ದಿವಸ ಆಚರಣೆ,

  • Writer: newsnowvijayanagar
    newsnowvijayanagar
  • Dec 27, 2024
  • 1 min read

ವಿಜಯನಗರ(ಹೊಸಪೇಟೆ)ಡಿ.27,ಮಹರಾಷ್ಟ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಮನುಸ್ಮೃತಿ ದಹನ ಮಾಡುವ ಮೂಲಕ ಸಮಾನತೆಗೆ ನಾಂದಿ ಹಾಡಿದ್ದರು ಹೊಸಪೇಟೆ ಜೈ ಭೀಮ್ ವೃತ್ತದಲ್ಲಿ ಅನೇಕ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮನುಸ್ಮೃತಿ ದಹನ ಮಾಡುವ ಮೂಲಕ ಅದರಲ್ಲಿದ್ದ ಅಸಮಾನತೆ ಭೇದಭಾವ ದಲಿತ ದಮನಿತರ ಕೆಳ ವರ್ಗದವರನ್ನು ಹತ್ತಿಕ್ಕುವ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ನೀತಿ ತಾರತಮ್ಯವನ್ನು ಹೋಗಲಾಡಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡುವುದರ ಮೂಲಕ ಶೋಷಿತ ವರ್ಗದ ಜನರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟು ಅನೇಕ ಹಕ್ಕುಗಳನ್ನು ನೀಡಿದ್ದಾರೆ.


ಈ ಸಂದರ್ಭದಲ್ಲಿ ಮರಡಿ ಜಂಬಯ್ಯ ನಾಯಕ ಸೋಮಶೇಖರ್ ಬಣ್ಣದಮನೆ ಅಲೆಮಾರಿ ಸಮುದಾಯದ ರಾಜ್ಯ ಅಧ್ಯಕ್ಷರಾದ ಸಣ್ಣ ಮಾರೆಪ್ಪ,ಎನ್.ವೆಂಕಟೇಶ್ (ಸ್ಲಂ ವೆಂಕಿ) ಸಣ್ಣ ಮಾರೆಪ್ಪ ರಾಮಚಂದ್ರ ಬಿಸಾಟಿ ಮಹೇಶ್,ಸೂರ್ಯ ನಾರಾಯಣ,ಮುದುಕಪ್ಪ ಚಲವಾದಿ, ಇಂತಿಯಾಜ್, ಚಲವಾದಿ ಮಹಾಸಭದ ರಾಜ್ಯ ಮಹಿಳಾ ಅದ್ಯಕ್ಷರಾದ ಈರಮ್ಮ ,ಡಿ ಎಸ್ ಎಸ್ ರಾಮಚಂದ್ರಬಾಬು, ಜೆ.ಸಿ ಈರಣ್ಣ, ರಮೇಶ್ ಚಲವಾದಿ, ಈಡಿಗರ ಮಂಜುನಾಥ್ ನಿಂಬಗಲ್ ರಾಮಕೃಷ್ಣ ಮರಿಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



Comments


bottom of page