top of page

ಪುಲ್ವಾಮ ಭಯೋತ್ಪಾದಕ ದಾಳಿಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ

  • Writer: newsnowvijayanagar
    newsnowvijayanagar
  • Feb 15
  • 1 min read

ವಿಜಯನಗರ(ಹೊಸಪೇಟೆ) ಫೆ,15; ನಗರದ ವಾಲ್ಮೀಕಿ ಸರ್ಕಲ್ ನಲ್ಲಿವಂದೇ ಮಾತರಂ ಫ್ಯೂಚರ್ ಫೌಂಡೇಶನ್ ಸಂಘಟನೆಯು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಪ್ರಾಣ ತ್ಯಾಗ ಮಾಡಿದ ಈ ಕರಾಳ ದಿನದ ಪ್ರಯುಕ್ತ ಹುತಾತ್ಮ ಸೈನಿಕರಿಗೆ ಪುಷ್ಪ ನಮನ ಸಲ್ಲಿಸಿ ಮೇಣದಬತ್ತಿ ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ree

ನಮ್ಮ ಸಂಘಟನೆಯ ವಾಕ್ಯ ಜನನಿ ಜನ್ಮಭೂಮಿ ಸತ್ಯಮೇವ ಜಯತೆ ವಂದೇ ಮಾತರಂ,ನಮ್ಮ ಸೇನೆಯ ಅತ್ಯಮೂಲ್ಯ ರತ್ನಗಳನ್ನು ಕಳೆದುಕೊಂಡಿದ್ದೇವೆ.ನಾವೆಲ್ಲ ಭಾರತೀಯರು ಒಂದೇ ಎನ್ನುವ ಒಗ್ಗಟ್ಟಿನ ಸಂದೇಶವನ್ನು ನಾವು ಸಾರಬೇಕು ಎಂದು ವಿಲಾಸ್ ನಾಯಕ ತಿಳಿಸಿದರು.



ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಈಶ್ವರ್ ನಾಯಕ, ಅಧ್ಯಕ್ಷ ನಾಣಿಕೇರಿ ಸದಾಶಿವ, ಪ್ರಧಾನ ಕಾರ್ಯದರ್ಶಿ ಎನ್ ವೆಂಕಟೇಶ್ (ಸ್ಲಂ ವೆಂಕಿ), ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ವಿಲಾಸ್ ನಾಯಕ.

ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ಬಿ.ಟಿ ಮಂಜುನಾಥ್, ಉಪಾಧ್ಯಕ್ಷ ಬೆಳಗೋಡು ಹುಲುಗಪ್ಪ (ಅಭಿ), ಖಜಾಂಚಿ ತನ್ವೀರ್, ಹನುಮಂತ ರಾಕೇಶ್, ಜಾವೀದ್, ಶ್ರೀನಿವಾಸ್, ಕೃಷ್ಣ, ಜೋಗಿ ತಾಯಪ್ಪ,ಕರಿ ಹನುಮ, ಅನುಪ್ ಕುಮಾರ,ಸಂದೀಪ್, ಫ್ರಾನ್ಸಿಸ್, ಗುಜ್ಜಲ ಕಿರಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page