top of page

ಗ್ರಾ.ಪಂ.ಚುನಾವಣೆ ಅಧ್ಯಕ್ಷರಾಗಿ ವಿ.ಅಂಕಲಮ್ಮ ಅವಿರೋಧ ಆಯ್ಕೆ.

  • Writer: newsnowvijayanagar
    newsnowvijayanagar
  • Jan 2
  • 1 min read

ವಿಜಯನಗರ (ಹೊಸಪೇಟೆ)ಜ,2:ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಗ್ರಾ.ಪಂ.ಅಧ್ಯಕ್ಷರಾಗಿ ವಿ.ಅಂಕಲಮ್ಮಗಂಡ ಎರಿಸ್ವಾಮಿ ಅವರು ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿ.ಅಂಕಲಮ್ಮ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ತಹಶೀಲ್ದಾರ್ ಶೃತಿ ಎಂ.ಎಂ.ಅವರುಘೋಷಿಸಿದರು.


ಅಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಈ ಸಂಧರ್ಭದಲ್ಲಿ ಉಪಾಧ್ಯಕ್ಷೆ ಷಣ್ಮುಖಮ್ಮ,ಪಿಡಿಓ ಬೀರಪ್ಪ, ಸೇರಿದಂತೆ ಸರ್ವ ಸದಸ್ಯರುಗಳು,ಊರಿನ ಮುಖಂಡರು ಹಾಗು ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Comentarios


bottom of page