top of page

ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

  • Writer: newsnowvijayanagar
    newsnowvijayanagar
  • Apr 12
  • 1 min read

ವಿಜಯನಗರ(ಹೊಸಪೇಟೆ) ಏ,12: ನಗರದ ತಹಶೀಲ್ದಾರರ ಕಚೇರಿ ಹತ್ತಿರ ರಸ್ತೆ ತಡೆ ನಡೆಸಿ ವಕ್ಫ್ ತಿದ್ದುಪಡಿ ಮಸೂದೆ 2025 ನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.ಸ್ಥಳೀಯ ಅಂಜುಮನ್ ‌ಕಮಿಟಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಹಾಗೂ ಅಂಜುಮನ್ ಕಮಿಟಿಯ ಅಧ್ಯಕ್ಷರು ಹಾಗು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಮತನಾಡಿ ಮಸ್ಲಿಂ ಕಾನೂನಿನ್ವಯ ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಪಿಸಲಾದ ಆಸ್ತಿಯಾಗಿದೆ.ವಕ್ಫ್ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ,

ಬಿಜೆಪಿ ಧಾರ್ಮಿಕ ಆಧಾರದ ಮೇಲೆ ರಾಜ್ಯವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಯೋಜನೆಗಳು ಫಲ ನೀಡುವುದಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ,ಅಮಿತ್ ಷಾ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು ಜಿಲ್ಲಾಧಿಕಾರಿಗಳ‌ ಮುಖಾಂತರ ಗೌರವಾನ್ವಿತ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಧೀಶರಿಗೆ ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ , ಅಂಜುಮನ್ ‌ಕಮಿಟಿ ಪದಾಧಿಕಾರಿಗಳಾದ ಬಿ. ಅನ್ಸರ್ ಭಾಷಾ,ಅಬೂಬ್ ಕಾರ್,ಕೆ.ಮೋಸೀನ್,ಸದ್ಧಾಂ ಹುಸೇನ್,ಫೈರೋಜ್ ಖಾನ್, ಗುಲಾಂ ರಸೂಲ್,ಡಾ. ದರ್ವೇಶ್,ಸಮಾಜದ ಮುಖಂಡರಾದ ಬಡಾವಲಿ, ಅಬ್ದುಲ್ ಖಾದರ ರಫಾಯಿ, ಅಸ್ಲಾಂ ಮಳಿಗಿ,ಪ್ರಗತಿಪರ ಸಂಘಟನೆ ಮುಖಂಡರಾದ ಜಂಭಯ್ಯ ನಾಯಕ್, ಕರುಣಾನಿಧಿ ಇತರರು ಮುಸ್ಲಿಂ ಭಾಂಧವರು ಭಾಗವಹಿಸಿದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page