top of page

ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಸಂಭವ : ಎಸ್ಪಿ ಶ್ರೀಹರಿಬಾಬು.

  • Writer: newsnowvijayanagar
    newsnowvijayanagar
  • Jan 18
  • 1 min read

ವಿಜಯನಗರ(ಹೊಸಪೇಟೆ)ಜ,18: ರಾಷ್ಟ್ರೀಯ ಹೆದ್ದಾರಿಗಳಲ್ಲೇ ಶೇ.75%ಕ್ಕೂ ಅಪಘಾತಗಳು ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ಸಂಭವಿಸುತ್ತವೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಹೇಳಿದರು.

ಪೊಲೀಸ್ ಇಲಾಖೆ ಹಾಗು ಸಾರಿಗೆ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ "ರಸ್ತೆ ಸುರಕ್ಷತಾ ಮಾಸಾಚರಣೆ ಜನವರಿ 2025" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ.



ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿವೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲೇ ರಸ್ತೆಗಳು ಉತ್ತಮವಾಗಿರುವುದರಿಂದ ಅತಿವೇಗದಿಂದ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆಯಿಂದ ಶೇ.75 ರಿಂದ 80% ಅಪಘಾತಗಳು ಸಂಭವಿಸುತ್ತಿವೆ ಎಂದರು.

ಪೊಲೀಸರು ಕಾನೂನು ಸುವ್ಯವಸ್ಥೆ, ಅಪರಾಧ, ಮತ್ತು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಅಪಘಾತಗಳು ಸಾಮಾನ್ಯವಾಗಿ ಬ್ರೇಕ್ ಫೇಲ್ ನಿಂದಲೋ, ಅಥವಾ ಹ್ಯುಮನ್ ಎರರ್ ನಿಂದಲೋ ಅಥವಾ ಅತಿಯಾದ ವಾಹನಗಳ ಭಾರದಿಂದಲೋ, ರಸ್ತೆ ದಾಟುವಾಗಲೂ ಸಂಭವಿಸುತ್ತವೆ. ಅಪಘಾತಗಳು ಹೆಚ್ಚಾಗಿ ಬೆಳಗಿನ ಜಾವ,ನಿದ್ದೆ ಮಬ್ಬು, ಮಂಜು ಕವಿದ ವಾತಾವರಣದಲ್ಲೂ ಸಹ ಸಂಭವಿಸುತ್ತವೆ. ಹೀಗಾಗಿ ಸಾರ್ವಜನಿಕರು ಇವುಗಳನ್ನು ಗಮನದಲ್ಲಿಕೊಂಡು ವಾಹನ ಚಲಾಯಿಸಿದರೆ ಅಪಘಾತಗಳನ್ನು ತಡೆಯಬಹುದು ಎಂದು ಹೇಳಿದರು.

ವಿಜಯನಗರ ಜಿಲ್ಲೆಯಲ್ಲಿ ಅಪಘಾತ ಪ್ರಮಾಣ 2022ಕ್ಕೆ ಹೋಲಿಸಿದರೆ 2023ರಲ್ಲಿ ಕಡಿಮೆ, 2023ಕ್ಕೆ ಹೋಲಿಸಿದರೆ 2024 ರಲ್ಲಿ ಇನ್ನೂ ಕಡಿಮೆ. ಒಟ್ಟಿನಲ್ಲಿ ಇಲ್ಲಿಯವರೆಗೆ ಶೇ.10ರಿಂದ 15% ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ ಎಂದರು.

ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದಾಗ ತಕ್ಷಣ ಆಸ್ಪತ್ರೆಗೆ ಸಾಗಿಸಲು ಮತ್ತು ಮಾಹಿತಿ ನೀಡಲು ಹೆದ್ದಾರಿ ಸಹಾಯಕರ ಗುಂಪು ರಚಿಸಲಾಗಿದೆ. ಇದರಿಂದ ಗಾಯಾಳುಗಳಿಗೆ ತಕ್ಷಣ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಅವರಿಗೆ ಸನ್ಮಾನಿಸಲಾಗುತ್ತಿದೆ ಎಂದರು.

ಸಾರಿಗೆ ಅಧಿಕಾರಿ ವಸಂತ ಚೌಹಾಣ್ ಮಾತನಾಡಿ, ಪ್ರತಿ ವರ್ಷ ಶೇ.10ರಿಂದ 15% ಅಪಘಾತಗಳನ್ನು ತಡೆಯುವ ಉದ್ದೇಶದಿಂದ ರಸ್ತೆ ಸುರಕ್ಷತಾ ಮಾಸಾಚರಣೆ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಸ್ಪಿ ಶ್ರೀಹರಿಬಾಬು ಸಾರ್ ಅವರು ಬಂದ ಮೇಲೆ ಅಪಘಾತಗಳ ಪ್ರಮಾಣ ಕಡಿಮೆಯಾಗಿದ್ದು ಸಂತಸದ ವಿಷಯವಾಗಿದೆ. ಅಪಘಾತವಾದಾಗ ಯಾರು ನೆರವಾಗುತ್ತಾರೋ ಅವರಿಗೆ ಬಹುಮಾನ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

100 ಹಾಸಿಗೆ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಸೋಮಶೇಖರ ಮಾತನಾಡಿ, ಅಪಘಾತಗಳಿಗೆ ಶೇ.86% ಪುರುಷರು, ಶೇ.14% ಮಹಿಳೆಯರು ತುತ್ತಾಗುತ್ತಿದ್ದಾರೆ. ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮೃತಪಟ್ಟರೆ, ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಗಾಯಾಳುಗಳಾಗುತ್ತಿದ್ದಾರೆ. ಗಾಯಗೊಂಡರೆ ತುಂಬಾ ಕಷ್ಟವಾಗುತ್ತದೆ. ಆತನ ದುಡಿಮೆ, ಆರೈಕೆಗೆ ತುಂಬಾ ಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ದಣಿವಾದಾಗ, ನಿದ್ದೆ ಬರುವಾಗ, ಕ್ರೇಜ್ ನಿಂದ ವಾಹನ ಚಲಾಯಿಸಬೇಡಿ. ಮುಂಜಾಗ್ರತೆಯೊಂದೇ ಅಪಘಾತ ತಪ್ಪಿಸಲು ಪರಿಹಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಎಸ್ಪಿ ಸಲೀಂ ಪಾಷಾ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಚಂದ್ರಶೇಖರ ಸೇರಿದಂತೆ ಇತರರು ಇದ್ದರು.

Comments


bottom of page