top of page

ಸಚಿವ ಸಂತೋಷ ಲಾಡ್ ಜನ್ಮದಿನ ಆಪತ್ ರಕ್ಷಕ ದಿನವಾಗಿ ಆಚರಣೆ : ಸಾಧಕರಿಗೆ ಸನ್ಮಾನ.

  • Writer: newsnowvijayanagar
    newsnowvijayanagar
  • Mar 1
  • 1 min read

ವಿಜಯನಗರ(ಹೊಸಪೇಟೆ):ನಗರದ ಗೌತಮ ಬುದ್ದ ಫಂಕ್ಷನ್ ಹಾಲ್ ನಲ್ಲಿ ಗುರುವಾರ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಜನ್ಮದಿನದ ಅಂಗವಾಗಿ "ಆಪತ್ ರಕ್ಷಕ" ದಿನಾಚರಣೆ ಹಮ್ಮಿಕೊಂಡಿದ್ದರು.

ಹೆದ್ದಾರಿಗಳಲ್ಲಿ ಅಪಘಾತವಾದ ಸಂಧರ್ಭದಲ್ಲಿ ಕರೆ ಮಾಡಿದ ತಕ್ಷಣ ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿ ಗಾಯ


ree

ಗೊಂಡವರನ್ನು ಆಸ್ಪತ್ರೆಗೆ ಸೇರಿಸಿ,ಅವರಿಗೆ ಚಿಕಿತ್ಸೆ ನೀಡುವ ಸದುದ್ದೇಶದಿಂದ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಸ್ಥಾಪಿಸಿದ ಕೀರ್ತಿ ರಂಗಸ್ವಾಮಿ ಡಿ ರಾಜ್ಯಧ್ಯಕ್ಷರು ಇವರಿಗೆ ಸಲ್ಲುತ್ತದೆ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ (ವಾಸುದೇವ‌ಮೇಟಿ ಬಣ) ಜಿಲ್ಲಾಧ್ಯಕ್ಷ ಸಿ.ಎ.ಗಾಳೆಪ್ಪ ಮಾತನಾಡಿದರು.

ರಾಜ್ಯದಲ್ಲಿ ಸಂಜೀವಿನಿ ಜೀವ ರಕ್ಷಕದ 30 ಸಾವಿರ ಸ್ವಯಂ ಸೇವಕರು ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದ 10 ನಿಮಿಷಗಳಲ್ಲೇ ಸ್ಥಳಕ್ಕೆ ಧಾವಿಸಿ,ಅವರನ್ನು ರಕ್ಷಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ,ಚಿಕಿತ್ಸೆ ಕೊಡಿಸುವ ಸೇವೆಯನ್ನು ಸ್ಮರಿಸಬೇಕು ಎಂದರು.ಕಾರ್ಮಿಕ ಸಚಿವ ಸಂತೋಷಲಾಡ್ ಅವರ ಜನ್ಮದಿನವನ್ನು ಆಪತ್ ರಕ್ಷಕರ ದಿನವನ್ನಾಗಿ ಆಚರಿಸುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಪ್ರಕಾಶ್ ರಾಜ್ಯದ್ಯಕ್ಷರು ರೈತ ಸಂಘ ಅವರು ವ್ಯಕ್ತಪಡಿಸಿದರು.

ಟ್ರಸ್ಟ್ ನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಸ್ವಯಂ ಸೇವಕರು ರಾಜ್ಯಾದ್ಯಂತ ಹೆದ್ದಾರಿಗಳಲ್ಲಿ ಅಪಘಾತದಲ್ಲಿ ನೊಂದವರ ಸೇವೆ ಮಾಡುತ್ತಿದ್ದಾರೆ.ಸಚಿವ ಸಂತೋಷ ಲಾಡ್ ಅವರ ಜನ್ಮದಿನದ ಅಂಗವಾಗಿ ಇಂದು ರಾಜ್ಯದ 15 ಜಿಲ್ಲೆಗಳಲ್ಲಿ ಆಪತ್ ರಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಕೆಲಸ ಮಾಡುತ್ತಿದೆ ಎಂದರು.

ಇದೇ ವೇಳೆ ಕೃಷಿಯಲ್ಲಿ ಸೇವೆಗೈದ ರೈತ ಸಂಘದ ರಾಜ್ಯಾಧ್ಯಕ್ಷ, ಎಂ.ಪ್ರಕಾಶ್, ಸಿ.ಎ.ಗಾಳೆಪ್ಪ,ಯು ಎಂ.ಬಸವರಾಜ ಕಕ್ಕುಪಿ, ಪತ್ರಿಕೋಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯನಿರತ ಪತ್ರಕರ್ತರಾದ ಪ್ರಕಾಶ್ ಕಾಕುಬಾಳು,ರೇಖಾ ಪ್ರಕಾಶ್, ಸೋಮಶೇಖರಯ್ಯ ಹಿರೇಮಠ,ಹಾಗು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೋ.ಧ.ವಿರುಪಾಕ್ಷಗೌಡ, ಉಮಾ ಮಹೇಶ್ವರ, ಬಣಕಾರ ಮೂಗಪ್ಪ, ನಿತಿನ್, ಪ್ರಿಯಾಂಕ, ಮಹಾಂತೇಶ ನೆಲ್ಲುಕುದುರೆ, ನಾಗರಾಜ, ಶ್ವೇತಾ, ನೀಲಪ್ಪ ಬಿ, ಬಿ.ರವೀಂದ್ರ, ನುಂಕೇಶ,ಕೆ.ಎಂ.ಬಸವರಾಜ, ರಾಜಪ್ಪ ಇವರನ್ನು ಸನ್ಮಾನಿಸಲಾಯಿತು.

ಜಾನಪದ ಕಲಾವಿದರಿಂದ ಗೀತೆಗಳ ಗಾಯನ ನಡೆಯಿತು.

ಬಿ.ನೀಲಪ್ಪ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಡಿ ವಿಶ್ವನಾಥ್ ಸಮಾಜ ಸೇವಕರು, ನೂರ್ ಮಹಮ್ಮದ್, ಅಂಬರೀಶ್ ನಾಯಕ್, ಬಸವರಾಜ್ ಸ್ವಾಮಿ, ವಿರೂಪಾಕ್ಷಿ ಜ್ಯೋತಿಷಿ.ನೂರ್ ಜಹಾನ್,ಲೇಖಕರು.ವೀರೇಶ್, ಇತರರು ಭಾಗವಹಿಸಿದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page