top of page

ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ.

  • Writer: newsnowvijayanagar
    newsnowvijayanagar
  • Mar 1
  • 1 min read

ವಿಜಯನಗರ(ಹೊಸಪೇಟೆ) ;ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮಕ್ಕಳು ಕೇವಲ ಓದಿನಲ್ಲಿ ಅಲ್ಲದೇ ಕ್ರಿಯಾ ಶೀಲತೆಯಲ್ಲಿಯೂ ಮುಂದಿದ್ದಾರೆ.ಶಾಲಾ ಆವರಣದಲ್ಲಿ ವೈಭವಯುತವಾಗಿ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಪ್ರತಿಭೆಯನ್ನು ಹಲವಾರು ಯೋಜನೆಗಳ ಮೂಲಕ ವಿಶೇಷ ಮಾದರಿಗಳನ್ನು ತಯಾರಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.ವಸ್ತು ಪ್ರದರ್ಶನಕ್ಕೆ ಆಗಮಿಸಿದ ಪಾಲಕರು ಮೆಚ್ಚುಗೆಯನ್ನು ವ್ಯಕ್ತಪಡಿಸದರು ವಿನೂತನವಾದ ವಿಭಿನ್ನವಾಗಿ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದರು.ಸೌರಶಕ್ತಿ ಚಾಲಿತ ವಾಹನ,ಸ್ವಯಂ ಚಾಲಿತ ಮನೆ ಮಾದರಿ, ಜ್ವಾಲಾಮುಖಿ ಸ್ಪೋಟ ಮಾದರಿಗಳು ಎಲ್ಲರನ್ನು ಆಕರ್ಷಿಸುತ್ತಿದ್ದವು.

ree

ಶಾಲಾ ಪ್ರಾಂಶುಪಾಲರು, ಶಿಕ್ಷಕರು,ಪೋಷಕರು ಮತ್ತು ವಿಶೇಷ ಅತಿಥಿಗಳು ವಿದ್ಯಾರ್ಥಿಗಳು ಈ ವೈಜ್ಞಾನಿಕ ಕಲ್ಪನಾ ಶಕ್ತಿಗೆ ತಲೆಬಾಗಿದರು. ಪ್ರತಿಯೊಂದು ಮಗುವಿನ ಪರಿಶ್ರಮ ಅವರು ತಯಾರಿಸಿದ ಮಾದರಿಯಲ್ಲಿ ಕಂಡು ಬರುತ್ತಿತ್ತು.ಮತ್ತು ಅದರ ಬಗ್ಗೆ ಅವರು ನೀಡುವ ವಿವರಣೆ ಕಂಡು ನಿಬ್ಬೆರಗಾಗಿದ್ದರು.

ವಿಜ್ಞಾನ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ ವಿಜಯನಗರದ ವೈಭವವನ್ನು ಸಾರುತ್ತಿತ್ತು.ರಾಜಧಾನಿ ಹಂಪೆಯ ವಿರುಪಾಕ್ಷ ಮಂದಿರ,ಕಲ್ಲಿನ ರಥ,ಸಾಸಿವೆಕಾಳು ಗಣೇಶ, ರಾಜಲಾಂಛನ ಎಲ್ಲರನ್ನೂ ತಮ್ಮತ್ತ ಕೈಬೀಸಿ ಕರೆಯುತ್ತಿತ್ತು. ಕಲಾಕಾರನ ಕೈಚಳಕ ಮೈ ಜುಮ್ಮೆನಿಸುವಂತಿತ್ತು.ಹಂಪಿ ಉತ್ಸವಕ್ಕೆ ನಮ್ಮ ವಸ್ತು ಪ್ರದರ್ಶನ ಮೊದಲ ಮೆಟ್ಟಿಲು ಎನ್ನುವುದು ಹೆಮ್ಮೆಯ ವಿಷಯ


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮುಂದೆಯೂ ಹೊಸ ಆವಿಷ್ಕಾರಗಳನ್ನು ಮಾಡುವಂತೆ ಪ್ರೇರಣೆ ನೀಡುತ್ತಾ ಮಾದರಿಗಳನ್ನು ಪ್ರದರ್ಶಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ತಿಳಿಸುತ್ತಾ ಅದರಲ್ಲಿ ಅತ್ಯುತ್ತಮವಾದ ಮಾದರಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಪ್ರತಿಯೊಬ್ಬರ ಪರಿಶ್ರಮ ಮತ್ತು ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.



Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page