top of page

ಧರ್ಮಸ್ಥಳ ಸಂಘದಿಂದ ; ಸಹಾಯಧನ ವಿತರಣಾ

  • Writer: newsnowvijayanagar
    newsnowvijayanagar
  • Feb 19
  • 1 min read

ಹೊಸಪೇಟೆ ನಗರದ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ 35 ನೆ ವಾರ್ಡ್ ನ ನಿವಾಸಿಯಾದ ಆರ್ ಯಶೋಧ ಅವರಿಗೆ


ree

ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ 10000/- ಮೊತ್ತದ ಮಂಜೂರಾತಿ ಪತ್ರವನ್ನು ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಅವರು ವಿತರಿಸಿದರು.


ಸದ್ರಿ ಸದಸ್ಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಸದಸ್ಯರಾಗಿದ್ದು ಸಂಘದ ಮೂಲಕ 3,00,000/- ಪ್ರಗತಿ ನಿಧಿ ಪಡೆದುಕೊಂಡು ಹೋಟೆಲ್ ಉದ್ಯಮ ಮಾಡುತ್ತಿದ್ದರು. ಇತ್ತೀಚಿಗೆ ಸದ್ರಿಯವರ ಹೋಟೆಲಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಆಗಿತ್ತು ಇದನ್ನು ಗಮನಿಸಿದ ಸ್ಥಳೀಯ ಕಾರ್ಯಕರ್ತರು ತಾಲೂಕಿನ ಯೋಜನಾಧಿಕಾರಿಯವರ ಮೂಲಕ ಪರಮಪೂಜ್ಯರಿಗೆ ಮನವಿ ಸಲ್ಲಿಸಿ ಮಂಜೂರಾತಿ ಪಡೆದುಕೊಂಡು ಸಹಾಯಧನ ವಿತರಿಸಿದರು ಈ ಸಂದರ್ಭದಲ್ಲಿ ಎಂ ಐ ಎಸ್ ಯೋಜನಾಧಿಕಾರಿ ಶಿಲ್ಪ ತಾಲೂಕು ಯೋಜನಾಧಿಕಾರಿ ಮಾರುತಿ ಎಸ್ ಹಣಕಾಸು ಪ್ರಬಂಧಕ ಸುನಿಲ್ ವಲಯದ ಮೇಲ್ವಿಚಾರಕ ಶರಣಬಸವ ಉಪಸ್ಥಿತರಿದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page