top of page

ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿ ಅಹ್ವಾನ

  • Writer: newsnowvijayanagar
    newsnowvijayanagar
  • Apr 18
  • 1 min read

ವಿಜಯನಗರ(ಹೊಸಪೇಟೆ), :ಗ್ರಾಮೀಣ ಭಾಗದ ಆಸಕ್ತ ನಿರುದ್ಯೋಗಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗಕ್ಕಾಗಿ ಮಹಿಳಾ ಹೊಲಿಗೆ ತರಬೇತಿ ಮತ್ತು ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಮಹಿಳಾ ಹೊಲಿಗೆ ತರಬೇತಿ ಹಾಗೂ ಬ್ಯೂಟಿ ಪಾರ್ಲರ್ ತರಬೇತಿಯು 30 ದಿನಗಳು ನಡೆಯಲಿದ್ದು,

ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು. ಅರ್ಜಿದಾರರು ವಿಜಯನಗರ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು.ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ರಿಂದ 45 ವರ್ಷದೊಳಗಿದ್ದು ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.ಅರ್ಜಿ ಸಲ್ಲಿಸಲು ಆಧಾರ ಕಾರ್ಡ್, ರೇಷನ್ ಕಾರ್ಡ್, ಅಂಕಪಟ್ಟಿ ಜೆರಾಕ್ಸ್ ಪ್ರತಿಯೊಂದಿಗೆ 3 ಪಾಸ್‌ಪೋರ್ಟ್ ಸೈಜ್ ಪೋಟೋಗಳೊಂದಿಗೆ ನಿದೇರ್ಶಕರ ಕಚೇರಿ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ,ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣ,ಪೈ ಹೋಟೆಲ್ ಎದರುಗಡೆ, ಬಸ್‌ಸ್ಟಾಂಡ್ ಹತ್ತಿರ ಹೊಸಪೇಟೆ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಏ.25 ರಂದು ಸಂದರ್ಶನ ನಡೆಯಲಿದ್ದು,ಏ.26 ರಿಂದ ತರಬೇತಿಗಳು ಆರಂಭವಾಗಲಿವೆ.ಹೆಚ್ಚಿನ ಮಾಹಿತಿಗಾಗಿ ಮೊ. 8861646570, 6360878255, 9481085217 ಸಂಪರ್ಕಿಸಬೇಕು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page