top of page

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರ

  • Writer: newsnowvijayanagar
    newsnowvijayanagar
  • Apr 9
  • 1 min read

ವಿಜಯನಗರ (ಹೊಸಪೇಟೆ) ನಗರದ ಶ್ರೀ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ವತಿಯಿಂದ, ಶರಣ ಸಂಸ್ಕೃತಿ ಸಂಸ್ಕಾರ ಶಿಬಿರವನ್ನು ಉಚಿತ ವಸತಿ ಮತ್ತು ಪ್ರಸಾದ ಸಹಿತವಾಗಿ ಹಮ್ಮಿಕೊಳ್ಳಲಾಗಿದ್ದು, 6 ನೇ ತರಗತಿಯಿಂದ 12ನೇ ತರಗತಿ ವರೆಗಿನ ಮಕ್ಕಳಿಗೆ, ಮುಂದಿನ ಪೀಳಿಗೆಯ ತಳಪಾಯ ಬುನಾದಿಯನ್ನು ಹಾಕುವ ನಿಟ್ಟಿನಲ್ಲಿ, ಮಕ್ಕಳ ಸಂಸ್ಕಾರಕ್ಕಾಗಿ ಶರಣ ಸಂಸ್ಕೃತಿ ಸಂಸ್ಕಾರ ಶಿಬಿರವನ್ನು ಏರ್ಪಡಿಸಲಾಗಿದ್ದು, ಸಕಲ ಸದ್ಭಕ್ತರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ. ಮಕ್ಕಳ ಮಾನಸಿಕ ಹಾಗು ದೈಹಿಕ ಆರೋಗ್ಯದ ಜೀವನಕ್ಕಾಗಿ, ಶಿಬಿರವನ್ನು ಏಪ್ರಿಲ್ 13 ರಿಂದ ಪ್ರಾರಂಭವಾಗಿ, ಏಪ್ರಿಲ್22ರ ವರೆಗೂ ನಡೆಯಲಿದ್ದು ,ಆಸಕ್ತವುಳ್ಳವರು ತಕ್ಷಣವೇ ಕೆಳಗೆ ನೀಡಿರುವ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಿ ನೋಂದಣಿ ಮಾಡಬೇಕಾಗಿ ಕೋರಲಾಗಿದೆ. ಶರಣ ಸಂಸ್ಕೃತಿ,ಸಂಸ್ಕಾರ ಶಿಬಿರದ ಮುಖ್ಯ ಉದ್ದೇಶಗಳು, ಮಕ್ಕಳಲ್ಲಿ ಶರಣ ಸಂಸ್ಕೃತಿ ಬೆಳೆಸುವುದು,ಮಕ್ಕಳ ಮನಸ್ಸಿನಲ್ಲಿ ಕಾಯಕ ,ದಾಸೋಹ, ಪ್ರಸಾದದ ಮಹತ್ವವನ್ನು ತಿಳಿಯಪಡಿಸುವುದು,ಶಿಸ್ತು, ನಿಯಮ ಪಾಲನೆ,ಹೃದಯ ವೈಶಾಲ್ಯತೆ ,ಸಮರ್ಪಣಾ ಮನೋಭಾವನೆ ,ದೇಶ ನಿಷ್ಠೆ, ದೇಶಭಕ್ತಿ ಮುಂತಾದ ಉದಾತ್ತ ಮನೋಭಾವನೆಗಳನ್ನು ಬೆಳೆಸಿಕೊಳ್ಳುವಂತೆ ತರಬೇತಿ ನೀಡುವುದು.ಯೋಗ, ವ್ಯಾಯಾಮ,ಆತ್ಮವಿಶ್ವಾಸ, ದೇಶೀ ಕ್ರೀಡೆಗಳುಗಳ ಮೂಲಕ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ದೃಢತೆಯನ್ನು ಹೊಂದಲು ಸಹಕರಿಸುವುದು,ಹಾಗೂ ಇತ್ಯಾದಿ ತರಬೇತಿಗಳ ಮೂಲಕ ಮಕ್ಕಳ ಸರ್ವoಗೀಣ ಅಭಿವೃದ್ಧಿಗೋಸ್ಕರ ಅನೇಕ ಕಾರ್ಯಕ್ರಮಗಳನ್ನು ಶರಣ ಸಂಸ್ಕೃತಿ ಸಂಸ್ಕಾರ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸರ್ವರೂ ಸದುಪಡಿಸಿಕೊಳ್ಳುವಂತೆ ಕೋರಲಾಗಿದೆ.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page