top of page

ಆರೋಗ್ಯ ಸಲಹೆ ಕಾರ್ಯಕ್ರಮ

  • Writer: newsnowvijayanagar
    newsnowvijayanagar
  • Jan 19
  • 1 min read

ವಿಜಯನಗರ (ಹೊಸಪೇಟೆ)ಜ,19 ಸ್ಮಯರ್ ಸ್ಕೂಲ್ ಸಭಾಂಗಣದಲ್ಲಿ ಓಂ ಶ್ರೀ ಸಿಂಧು ಸೃಷ್ಟಿ ಸೇವಾ ಟ್ರಸ್ಟ್ ವತಿಯಿಂದ ಹೆಣ್ಣು ಮಕ್ಕಳಿಗೆ ಬಟ್ಟೆ ಮತ್ತು ಬಾಳೆ ನಾರಿನಿಂದ ಮಾಡಿದ ಪ್ಯಾಡ್ ಗಳ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು

ಕಾರ್ಯಕ್ರಮವನ್ನು ಉದ್ದೇಶಿಸಿ ಭಾಗ್ಯ ಅವರು ಮಾತನಾಡಿ ಮಕ್ಕಳಿಗೆ ಋತುಚಕ್ರ ಆದ ಸಂದರ್ಭದಲ್ಲಿ ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಬಟ್ಟೆಯಿಂದ ತಯಾರಿಸಿದ ಪ್ಯಾಡ್ ಹೇಗೆ ಉಪಯೋಗಿಸ ಬಹುದು, ಶುಚಿತ್ವ ಮಾಡಿ ಬಿಸಿಲಿನಲ್ಲಿ ಒಣಗಿಸಿ ಹೇಗೆ ಮರುಬಳಕೆ ಮಾಡಬಹುದು. ನೈರ್ಮಲ್ಯದಿಂದ ಪರಿಸರದಲ್ಲಿ ಉಪಯೋಗಿಸ ಬಹುದಾದ ಪ್ಯಾಡ್ ಬಗ್ಗೆ ಮಾಹಿತಿ ನೀಡಿದರು ಹಾಗೂ ಪ್ರಾಕೃತಿಕವಾಗಿ ದೊರೆಯುವ ಬಾಳೆದಿಂಡಿನಿಂದ ಹಲವಾರು ವಸ್ತುಗಳನ್ನು ಮಾಡಬಹುದು ಎಂದು ಮಕ್ಕಳಿಗೆ ತಿಳಿಯಪಡಿಸಿದರು. ಅವರ ಟ್ರಸ್ಟ್ ವತಿಯಿಂದ



ನೀಡುವ ಉಚಿತ ಹೊಲಿಗೆ ತರಬೇತಿ ಶಿಬಿರದ ಬಗ್ಗೆ ಮಹಿಳೆಯರಿಗೆ ವಿಶೇಷ ಮಾಹಿತಿ ನೀಡಿದರು

ಈ ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷರಾದ ಪಿ.ಸಿ.ಶಾಂತ. ಶ್ರೀಮತಿ.ವಿ.ಭಾಗ್ಯಲಕ್ಷ್ಮಿ.ಬೀನ ರೂಪ ಲತಾ ಕರುನಾಡು ಕಟ್ಟಡ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷರು..ರೈತ ಸಂಘದ ತಾಲೂಕು ಅಧ್ಯಕ್ಷರು.ಶೋಭಾ ರೈತ ಸಂಘದ ಸದ್ಯಸರು.ಮತ್ತು ಶಿಕ್ಷಕರಾದ ಸರೊಜಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Comments


bottom of page