top of page

ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ,ಸಂಗೀತ ನಿರ್ದೇಶಕ ಸ್ಯಾಮಸನ್‌ಗೆ ಗೌರವ*

  • Writer: newsnowvijayanagar
    newsnowvijayanagar
  • Feb 7
  • 1 min read

ಹೊಸಪೇಟೆ (ವಿಜಯನಗರ) ಫೆ, 07: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಮತ್ತು ಬಿಜಾಪೂರ ಜಿಲ್ಲಾ ಘಟಕದಿಂದ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಯನ್ನು ಗಿಟಾರಿಸ್ಟ್, ಸಂಗೀತ ನಿರ್ದೇಶಕ ಸ್ಯಾಮಸನ್ ಪೆಂಡೆಮ್ ಅವರಿಗೆ ಪ್ರದಾನ ಮಾಡಲಾಯಿತು.


ree

ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿ ತಮ್ಮ ೨೩ನೇ ವಯಸ್ಸಿನಲ್ಲಿಯೇ ಚಲನಚಿತ್ರ ಸಂಗೀತ ನಿರ್ದೇಶಕರಾಗಿ ಸೂರ್ಯ ದಿ ಗ್ರೇಟ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಹಾಡು ಹಾಡಿ ಖ್ಯಾತರಾದ ಗಿಟಾರ್,ಕೀ ಬೋರ್ಡ್ ಮತ್ತು ಡ್ರಮ್ಸ್ ಶಿಕ್ಷಕ ಮತ್ತು ಸಿಂಫೊನಿ ಮ್ಯುಸಿಕ್ ಅಕಾಡೆಮಿಯ ಸಂಸ್ಥಾಪಕರೂ, ಕಳೆದ ೨೫ ವರ್ಷದಲ್ಲಿ ಸುಮಾರು ಆರು ಸಾವಿರ ಮಕ್ಕಳಿಗೆ ಸಂಗೀತ ಕಲಿಸಿದ್ದಾರೆ.


ಹಲವು ವರ್ಷಗಳಿಂದ ಮಕ್ಕಳಿಗೆ, ಶೋಷಿತರಿಗೆ,ನಿರುದ್ಯೋಗಿ ಯುವಕ ಯುವತಿಯರಿಗೆ ಆಪ್ತ ಸಮಾಲೋಚನೆ (ಕೌನ್ಸಿಲ್ಲಿಂಗ) ಮೂಲಕ ಅವರ ಬಾಳಿಗೆ ಬೆಳಕಾದ ಸ್ಯಾಮಸನ್ ಪೆಂಡೆಮ್ ಅವರಿಗೆ ಬಿಜಾಪೂರ ಜಿಲ್ಲಾ ಮುದ್ದೆಬಿಹಾಳದಲ್ಲಿ ನಡೆದ ವರ್ಣರಂಜಿತ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ, ಶಾಸಕ ಮತ್ತು ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಗುರುರಾಜ ಹೊಸಕೋಟೆ,ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ,ಬೆಲ್ ಬಾಟಮ್ ಚಿತ್ರ ಖ್ಯಾತಿಯ ಕಲಾವಿದ ಕಡಬಗೆರೆ ಮುನಿರಾಜು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ಮತ್ತು ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಬಿಜಾಪೂರ ಜಿಲ್ಲಾಧ್ಯಕ್ಷ, ಪತ್ರಕರ್ತ ಪುಂಡಲೀಕ ಮುರಾಳ, ಕಲಾವಿದರು,



ಗಣ್ಯರು ಪಾಲ್ಗೊಂಡಿದ್ದರು.

Recent Posts

See All
ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ವಿಜಯನಗರ(ಹೊಸಪೇಟೆ)ಮೇ: ಹೊಸಪೇಟೆ ನಗರ ಉಪವಿಭಾಗ -1 ರ ಡ್ಯಾಂ ರಸ್ತೆಯ ಜೆಸ್ಕಾಂ ಕಚೇರಿಯಲ್ಲಿ ಮೇ.17 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಗ್ರಾಹಕರ ಕುಂದು...

 
 
 

Comments


bottom of page