top of page

ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಮನೆ ಹಸ್ತಾಂತರ

  • Writer: newsnowvijayanagar
    newsnowvijayanagar
  • Jan 4
  • 1 min read

ವಿಜಯನಗರ (ಹೊಸಪೇಟೆ)ಜ,04: ನಾಗಲಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಶಾಸನ ಪಡೆಯುವಂತಹ ಫಲಾನುಭವಿಯಾದ ಮಲ್ಲಮ್ಮ ಅವರಿಗೆ ಧರ್ಮಸ್ಥಳ ಸಂಸ್ಥೆಯ ವಾಸ್ತಲ್ಯ ಕಾರ್ಯಕ್ರಮದ ಅಡಿಯಲ್ಲಿ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರು ಹಾಗೂ ಮಾತೋಶ್ರೀ ಹೇಮಾವತಿ ಅಮ್ಮನವರ ಆಶೀರ್ವಾದದಿಂದ ನಿರ್ಮಿಸಿದಂತಹ ವಾತ್ಸಲ್ಯ ಮನೆಯನ್ನು ಸಂಸ್ಥೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕರಾದ ಜೆ ಚಂದ್ರಶೇಖರ್, ಹಾಗೂ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಅವರು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಪಲಾನುಭವಿಗೆ ಮನೆಯನ್ನು ಹಸ್ತಾಂತರ ಮಾಡಿದರು. ನಂತರ ಮಾತನಾಡಿದ ಅವರು ಭಗವಂತ ಭೂಮಿಯ ಮೇಲೆ ಸಕಲ ಜೀವಿಗಳಿಗೆ ಬದುಕಲಿಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾನೆ ಆದರೆ ಹುಟ್ಟು ಮತ್ತು ಸಾವಿನ ಮಧ್ಯದ ಹೋರಾಟದಲ್ಲಿ ಹಲವಾರು ಏರುಪೇರುಗಳನ್ನು ಕಾಣುತ್ತೇವೆ ಸಿರಿವಂತಿಕೆ, ಬಡತನ,ಮಧ್ಯಮ, ಅನುಕೂಲ,ಅನಾನುಕೂಲ ಮುಂತಾದ ಬದಲಾವಣೆಗಳನ್ನು ಜೀವನದಲ್ಲಿ ಅನುಭವಿಸುತ್ತೇವೆ ಆದರೆ ಭಗವಂತನ ದೃಷ್ಟಿಯಲ್ಲಿ ಯಾರೂ ಶ್ರೀಮಂತರು ಅಲ್ಲ ಯಾರು ಬಡವರು ಅಲ್ಲ ಅವನಿಗೆ ಎಲ್ಲರೂ ಒಂದೇ ಇದೇ ತತ್ವವನ್ನು ಅಳವಡಿಸಿ ಕೊಂಡಂತ ಪರಮ ಪೂಜ್ಯರು ಹಾಗೂ ಮಾತೋಶ್ರೀ ಅಮ್ಮನವರು ಸಮಾಜದಲ್ಲಿ ಯಾರು ತೀರ ನಿರ್ಗತಿಕರಿದ್ದಾರೆ ಅಂಥವರನ್ನು ಹುಡುಕಿ ಅವರಿಗೊಂದು ಸೂರು ಕಲ್ಪಿಸಿ ಕೊಡುವ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ ಇಂತಹ ಪುಣ್ಯದ ಕೆಲಸಕ್ಕೆ ಸ್ಥಳೀಯ ಮುಖಂಡರುಗಳು ಕೈಜೋಡಿಸಿದಾಗ ಅದಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದರು.



ಈ ಸಂದರ್ಭದಲ್ಲಿ ತಾಲ್ಲೂಕಿನ ಯೋಜನಾಧಿಕಾರಿ ಮಾರುತಿ ಎಸ್, ನಾಗಲಾಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿಲ್ಹಾನ್ ಸರ್, ಗ್ರಾಮ ಪಂಚಾಯಿತಿನ ಸದಸ್ಯರುಗಳಾದ ಸೋಮಣ್ಣ, ಹನುಮಂತಪ್ಪ, ಶಂಕ್ರಯ್ಯ, ಯರ್ರೀಸ್ವಾಮಿ, ಅಂಜಿನಪ್ಪ, ಹನುಮಂತಮ್ಮ,ಊರಿನ ಮುಖಂಡರಾದ ತೀರಕಪ್ಪ ಡಾll. ಗೋಪಾಲ ರೆಡ್ಡಿ, ವಲಯದ ಮೇಲ್ವಿಚಾರಕರಾದ ನಂದನ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ರೇಖಾ, ಸೇವಾ ಪ್ರತಿನಿಧಿ ಕಲಾವತಿ, ಯಶೋಧ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments


bottom of page