top of page

ವಿಜಯನಗರ ಸಾಮ್ರಾಜ್ಯದ 869 ನೇ ಸಂಸ್ಥಾಪನಾ ದಿನಾಚರಣೆ.

  • Writer: newsnowvijayanagar
    newsnowvijayanagar
  • Apr 18
  • 1 min read

ಹೊಸಪೇಟೆ(ವಿಜಯನಗರ)ಏ,18: ಅನಂತಶಯನಗುಡಿಯ ಶ್ರೀ ಯಲ್ಲಾಲಿಂಗ ಸ್ವಾಮಿಗಳ ಮಠದ ಆವರಣದಲ್ಲಿ ಶುಕ್ರವಾರ ಕಲಬುರ್ಗಿ ವಿಭಾಗ ತಿಂಥಿಣಿ ಬ್ರಿಜ್ ನ ಕಾಗಿನೆಲೆ ಕನಕ ಗುರುಪೀಠದ ಪರಮ ಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ವಿಜಯನಗರ ಸಾಮ್ರಾಜ್ಯದ 869 ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು,

ಈ ವೇಳೆ ಮಾತನಾಡಿದ ಶ್ರೀಗಳು,ಭಾರತದ ಇತಿಹಾಸದಲ್ಲಿ ಹಿಂದೂ ಸಾಮ್ರಾಜ್ಯ ದೆಹಲಿ, ಹೈದ್ರಾಬಾದ್ ಸುಲ್ತಾನ ಸೇರಿದಂತೆ ವಿವಿಧ ದೊರೆಗಳ ದಬ್ಬಾಳಿಕೆಯಿಂದ ನಶಿಸಿ ಹೋಗುವ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಮರು ಸ್ಥಾಪಿಸಿದ ಹಕ್ಕಬುಕ್ಕರು ಪ್ರಪಂಚದ ಗಮನ ಸೆಳೆದ ಮಹಾನ್ ಸಾಧಕರಾಗಿದ್ದರು. ಕ್ರಿ.ಶ.1336ರ ಮುಂಚೆ ವಿಜಯನಗರ ಸಾಮ್ರಾಜ್ಯ ಬೇರೆ ಬೇರೆ ಸಂಸ್ಥಾನಗಳ ಅಂಗ ರಾಜ್ಯವಾಗಿತ್ತು.ಕ್ರಿ.ಶ.1336 ರ ನಂತರ ವಿಜಯನಗರ ಸಾಮ್ರಾಜ್ಯ ಸ್ವತಂತ್ರಗೊಂಡು ಸಾಮ್ರಾಜ್ಯ ಸ್ಥಾಪನೆಯಾಯಿತು. ಕರ್ನಾಟಕ,ಆಂದ್ರ,ಗೋವಾ, ಕೇರಳ,ತಮಿಳುನಾಡು,



ಹಾಗು ತೆಲಂಗಾಣ ಈ 6 ದಕ್ಷಿಣದ ರಾಜ್ಯಗಳಿಗೆ ವಿಜಯನಗರವನ್ನು ಒಂದು ರಾಜಧಾನಿಯನ್ನಾಗಿ ಮಾಡಿದ ಹಕ್ಕಬುಕ್ಕರು ಕುರುಬ ಸಮಾಜದ ವಂಶಸ್ಥರು. ಸರ್ಕಾರದ ಅಧಿಕೃತ 68 ದಾಖಲೆಗಳು ಹಕ್ಕಬುಕ್ಕರು ಕುರುಬ ಸಮಾಜದವರು ಎಂದು ಹೇಳುತ್ತಿವೆ.ಹಾಲುಮತ ಸಮಾಜದವರು ನಮ್ಮ ಪೂರ್ವಜರ ಇತಿಹಾಸ ತಿಳಿದುಕೊಳ್ಳುವ ಮೂಲಕ ಹಕ್ಕಬುಕ್ಕರನ್ನು ಸ್ಮರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು.ಸರ್ಕಾರ ಏಪ್ರಿಲ್ 18 ರಂದು ಹಂಪಿ ಉತ್ಸವ, ವಿಜಯನಗರ ಉತ್ಸವವನ್ನಾಗಿ ಆಚರಣೆ ಮಾಡುವಂತಾಗಬೇಕು ಎಂದರು,

ಈ ಸಂಧರ್ಭದಲ್ಲಿ ಶ್ರೀಲಿಂಗ ಬೀರದೇವ ಸ್ವಾಮೀಜಿ, ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಅವರ ಪತ್ನಿ ರಶ್ಮಿ ರಾಜಶೇಖರ ಹಿಟ್ನಾಳ್, ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ,ಮುಖಂಡರಾದ ಗೌಡರ ರಾಮಣ್ಣ,ವಕೀಲರಾದ ಟಿ. ಕೆ. ಕಾಮೇಶ,ಹೆಚ್. ಮಹೇಶ್,ವೈ.ಯರಿಸ್ವಾಮಿ, ಗಂಟೆ ಸೋಮಶೇಖರ, ಬಿಸಾಟಿ ತಾಯಪ್ಪ,ಬಂದಿ ಭರಮಪ್ಪ, ಸೇರಿದಂತೆ ಹೊಸಪೇಟೆ, ಕಂಪ್ಲಿ, ಗಂಗಾವತಿ, ಕೊಪ್ಪಳ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕು ಮುಖಂಡರು ಇದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comentários


bottom of page