top of page

ವಿನಾಯಕ ಬಡಾವಣೆ, ಮೂಲಭೂತ ಸೌಕರ್ಯಗಳನಿರ್ಲಕ್ಷ್ಯ!

  • Writer: newsnowvijayanagar
    newsnowvijayanagar
  • Dec 23, 2024
  • 1 min read

ಹೊಸಪೇಟೆ(ವಿಜಯನಗರಡಿ,23.ವಿನಾಯಕ ಬಡಾವಣೆಯ ನಿವಾಸಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರದಾಡುವ  ಸ್ಥಿತಿ  ನಿರ್ಮಾಣವಾಗಿದೆ ಎಂದು  ಬಡಾವಣೆಯ ನಿವಾಸಿಗಳು ತಮ್ಮ



ಅಸಮಧಾನ ವ್ಯಕ್ತಪಡಿಸಿದ್ದು ;  ಪ್ರಸ್ತುತ ಬಡಾವಣೆಯಲ್ಲಿ  ಸಿಸಿ ರಸ್ತೆಗಳ ನಿರ್ಮಾಣ, ವಿದ್ಯುತ್ ಬೀದಿ ದೀಪಗಳು, ಕುಡಿಯುವ  ನೀರಿನ  ಸರಬರಾಜು, ಕಸ ವಿಲೇವಾರಿ, ಮುಖ್ಯವಾಗಿ ರಸ್ತೆಗಳಿಗೆ  ಸಿಸಿ  ಕ್ಯಾಮೆರಾ  ಅಳವಡಿಕೆ , ಪೊಲೀಸ್ ಚೌಕಿ  ನಿರ್ಮಾಣ, ರಸ್ತೆಗಳಿಗೆ ಹಾಗೂ ಕ್ರಾಸ್ ಗಳಿಗೆ  ನಾಮ ಫಲಗಳನ್ನು  ಅಳವಡಿಸುವ ಕುರಿತು,ಹೊಸಪೇಟೆ ನಗರಸಭೆಗೆ ಮನವಿ ಸಲ್ಲಿಸುವ ಮೂಲಕ  ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಮನವರಿಕೆ ಮಾಡಿಕೊಡಲು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ  ಹೆಚ್ .ಆರ್ . ಗವಿಯಪ್ಪ ಶಾಸಕರಿಗೂ ಸಹ  ಮನವಿ ಪತ್ರ ಸಲ್ಲಿಸಲು ಬಡಾವಣೆಯ ನಾಗರೀಕರು ತೀರ್ಮಾನಿಸಿದ್ದಾರೆ.


ವಿನಾಯಕ ಬಡಾವಣೆ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ವಿನಾಯಕ ನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಮೂಲಕ ಹೋರಾಟಗಳನ್ನು ಮಾಡಲು ನಾಗರೀಕರು ತೀರ್ಮಾನಿಸಿದ್ದಾರೆ. ಅವರು ಇತ್ತೀಚಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷರಾದ ಆಂಜನೇಯ,ಉಪಾಧ್ಯಕ್ಷರಾದ ಎಸ್ ಎಂ, ಭಾಷಾ,ಮಹೇಶ ಜೋಶಿ ಅವರು, ಎ.ಎಂ. ಬಸವರಾಜ್  ಇತರರು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗಿಗಳಾಗಿದ್ದರು

Comentários


bottom of page