top of page

ವಿಜಯನಗರ ಜಿಲ್ಲಾ ನಾಗರೀಕರ ವೇದಿಕೆಯಿಂದ ಶ್ಯಾಮ ಚೌಧರಿ ಅವರಿಗೆ ಸನ್ಮಾನ

  • Writer: newsnowvijayanagar
    newsnowvijayanagar
  • Jan 25
  • 1 min read

ಜ.೨೫.




ಹೊಸಪೇಟೆಯ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಶ್ಯಾಮ ಚೌಧರಿ ಇವರು ದಕ್ಷಿಣ ಭಾರತದ ಅಗ್ರವಾಲ ಸಮಾಜದ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಶುಭ ಸಂಧರ್ಭದಲ್ಲಿ ವಿಜಯನಗರ ಜಿಲ್ಲಾ ನಾಗರೀಕ ವೇದಿಕೆಯಿಂದ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಜಯನಗರ ಜಿಲ್ಲಾ ನಾಗರೀಕ ವೇದಿಕೆ ಅಧ್ಯಕ್ಷರು ಆದಂತಹ ದೊಡ್ಡಮನಿ ಪಾಂಡುರ0ಗ ಶೆಟ್ಟಿ ಹಾಗೂ ಕೆ.ಹೆಚ್.ಎಮ್. ವಿಜಯ ಕುಮಾರ್ ಅವರ ನೇತೃತ್ವದಲ್ಲಿ ನಾಗರೀಕ ವೇದಿಕೆಯ ಸದಸ್ಯರ ಸಮ್ಮುಖದಲ್ಲಿ ಶ್ಯಾಮ ಚೌಧರಿ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ದೊಡ್ಡಮನಿ ಪಾಂಡುರ0ಗ ಶೆಟ್ಟಿ, ಕೆ.ಹೆಚ್.ಎಮ್. ವಿಜಯ ಕುಮಾರ್, ಸುನೀತಾ ಅನ್ವೇಕರ್, ಮಲ್ಲಿಕಾರ್ಜುನ ಸ್ವಾಮಿ, ಚಂದ್ರಶೇಖರ್ ಹಾಗೂ ವ್ಯಾಸರಾಜ ಜೋಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಗನ್ನಾಥ, ಶರಭನಗೌಢ,



ಕುಬೇರ ಸ್ವಾಮಿ, ಹೆಚ್.ಎಂ. ಸಿದ್ಧಲಿಂಗಯ್ಯ, ಲಾವಣ್ಯ ಹಿರೇಮಠ ಭಾಗವಹಿಸಿದ್ದರು.


ಕೆ.ಹೆಚ್.ಎಮ್ ವಿಜಯಕುಮಾರ್ ಇವರು ನಿರೂಪಿಸಿದರು. ಹೆಚ್.ಎಂ. ಸಿದ್ದಲಿಂಗಯ್ಯ ವಂದಿಸಿದರು. ಶ್ಯಾಮ ಚೌಧರಿ ಇವರ ಶ್ರೀಮತಿ ಮತ್ತು ಪುತ್ರರು ಉಪಸ್ಥಿತರಿದ್ದರು.

Comments


bottom of page