top of page

ವಿಜಯನಗರ ಕಾಲೇಜು ಶೈಕ್ಷಣಿಕ ಅಭಿವೃದ್ಧಿಗೆ ಅಡಿಪಾಯ :ಶಾಸಕ ಜೆ.ಎನ್.ಗಣೇಶ್

  • Writer: newsnowvijayanagar
    newsnowvijayanagar
  • Dec 12, 2024
  • 1 min read

ವಿಜಯನಗರ(ಹೊಸಪೇಟೆ) ವಿಜಯನಗರ ಕಾಲೇಜಿನ ಸರ್ವ ಸಂಘಗಳು, ಇಂಗ್ಲೀಷ ಭಾಷಾ ಪ್ರಯೋಗಾಲಯ ಹಾಗೂ ವಾಣಿಜ್ಯ ಪ್ರಯೋಗಾಲಯವನ್ನು ಕಂಪ್ಲಿಯ ಶಾಸಕರು ಜೆ ಎನ್ ಗಣೇಶ್‌ರವರು ಉದ್ಘಾಟನೆ ಮಾಡಿ. ಸಭೆಯನ್ನುದ್ದೇಶಿಸಿ ಮಾತನಾಡಿದರು ವಿಜಯ ನಗರ ಕಾಲೇಜು1964ರಲ್ಲಿಯೇ ಪ್ರಾರಂಭವಾದ ಕಾಲೇಜು ಶೈಕ್ಷಣಿಕ ಅಭಿವೃದ್ಧಿಗೆ ಅಡಿಪಾಯ ಈ ಭಾಗದ ಜನರ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ನಿರಂತರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.ತಾವು ಸಹ ಇದೇ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದನ್ನು ನೆನಪಿಸಿಕೊಂಡರು ವಿದ್ಯಾರ್ಥಿಗಳು ಇಂಗ್ಲೀಷ್ ಭಾಷಾ ಪ್ರಯೋಗಾಲಯ, ವಾಣಿಜ್ಯ ಪ್ರಯೋಗಾಲಯದಲ್ಲಿ ತರಬೇತಿ ಪಡೆದುಕೊಂಡು ಕೌಶಲ್ಯ ಪ್ರಾವಿಣ್ಯತೆ, ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು


ಅಧ್ಯಕ್ಷತೆಯನ್ನು ವಹಿಸಿದ್ದ ಬಳ್ಳಾರಿ ವೀ. ವಿ. ಸಂಘದ ಅಧ್ಯಕ್ಷರು ಅಲ್ಲಂ ಗುರು ಬಸವರಾಜ ಸಂಘ ಯಾವತ್ತು ಕಾಲೇಜಿಗೆ ಆರ್ಥಿಕ ಬಲವನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು. ಮುಖ್ಯ ಅಥಿತಿಗಳಾದ ವೀ.ವಿ ಸಂಘದ ಕಾರ್ಯದರ್ಶಿಗಳು ಡಾ.ಅರವಿಂದ ಪಟೇಲರು ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳುವುದರ ಜೊತೆಗೆ ಕೌಶಲ್ಯದ ಕಲೆಗಳನ್ನು ಬೆಳೆಸಿಕೊಂಡು ಸೂಕ್ತವಾದ ಉದ್ಯೋಗಗಳನ್ನು ಪಡೆಯಬಹುದು ಎಂದು ತಿಳಿಸಿದರು.



ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ ಪ್ರಭುಗೌಡ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಟಿ ಎಂ ಪ್ರಭುಸ್ವಾಮಿ ಅರ್ಥಶಾಸ್ತ್ರ ಉಪನ್ಯಾಸಕರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು


ಈ ಸಂದರ್ಭದಲ್ಲಿ ವೀ.ವಿ. ಸಂಘದ ಸಹ ಕಾರ್ಯದರ್ಶಿಗಳಾದ ಯಾಳಿ ಮೇಟಿ ಪೊಂಪನಗೌಡ್ರು, ವಿಜಯನಗರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಎನ್. ಮೆಟ್ರಿಯವರು, ಹೊಸಪೇಟೆ ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಗೊಗ್ಗ ಚನ್ನಬಸವರಾಜ,ಹೊಸಪೇಟೆ ವೀ.ವಿ. ಸಂಘದ ಅಧ್ಯಕ್ಷರಾದ ಕೋರಿ ಶೆಟ್ರು ಲಿಂಗಪ್ಪ, ವಿಜಯನಗರ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪ್ರಭುಗೌಡ,ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಮಲ್ಲಿಕಾರ್ಜುನಗೌಡ ಹಾಗೂ ಕುರುಗೋಡು ಪುರಸಭೆಯ ಅಧ್ಯಕ್ಷ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಶೇಖಣ್ಣ ಉಪಸ್ಥಿತರಿದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page