top of page

ಕಳ್ಳತನವಾಗಿದ್ದ123 ಮೊಬೈಲ್ ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ವಿಜಯನಗರ ಪೊಲೀಸರು

  • Writer: newsnowvijayanagar
    newsnowvijayanagar
  • Mar 8
  • 1 min read


ವಿಜಯನಗರ: ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಚರಣೆಯಲ್ಲಿ ಸುಮಾರು 2074000 ಮೌಲ್ಯದ 123 ಮೊಬೈಲ್ ಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡು ವಾರಸ್ತುದಾರರಿಗೆ ವಾಪಸ್ ಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ತಿಳಿಸಿದರು.ಹೊಸಪೇಟೆ ಉಪ-ವಿಭಾಗದ ಸರಹದ್ದಿನಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡ ಬಗ್ಗೆ ಅರ್ಜಿದಾರರು ನೀಡಿದ ದೂರಿನ ಮೇರೆಗೆ ಶ್ರೀಹರಿಬಾಬು, ಬಿ.ಎಲ್ ಐ.ಪಿ.ಎಸ್ ರವರು ನೀಡಿದ ಸೂಕ್ತ ಮಾರ್ಗದರ್ಶನದಲ್ಲಿ ಶ್ರೀ ಸಲೀಮ್ ಪಾಷಾ, ಅಡಿಷನಲ್ ರವರ ಸಲಹೆ ಸೂಚನೆಯ ಮೇರೆಗೆ ಡಾ:ಟಿ.ಮಂಜುನಾಥ ಡಿ.ಎಸ್.ಪಿ. ಹೊಸಪೇಟೆ ರವರ ನೇತೃತ್ವದಲ್ಲಿ ಶ್ರೀ.ವಿರುಪಾಕ್ಷಪ್ಪ, ಪಿ.ಎಸ್.ಐ. ಬಡಾವಣೆ ಠಾಣೆ, ಸಿಬ್ಬಂದಿಯಾದ ಕು.ಆರ್.ನಂದಿನಿ, ಮಪಿಸಿ-541 ಚಿತ್ತವಾಡಿ ಪೊಲೀಸ್ ಠಾಣೆ ಮತ್ತು ಸಿ.ಡಿ.ಆರ್ ಘಟಕದ ಸಿಬ್ಬಂದಿ ಶ್ರೀ ಕುಮಾರನಾಯ್ಕ ಪಿ.ಸಿ-189 ರವರು ಶ್ರಮವಹಿಸಿ ಹೊಸಪೇಟೆ ಉಪ-ವಿಭಾಗದ ಠಾಣೆಗಳಾದ, ಪಟ್ಟಣ ಠಾಣೆಯ 65, ಮೊಬೈಲ್, ಗ್ರಾಮೀಣ ಠಾಣೆ-29, ಚಿತ್ತವಾಡಿ ಠಾಣೆ-6, ಕಮಲಾಪುರ ಠಾಣೆ-17, ಹಂಪಿ ಪ್ರವಾಸಿ ಠಾಣೆ-02, ಟಿ.ಬಿ.ಡ್ಯಾಂ ಠಾಣೆ-03, ಬಡಾವಣೆ ಠಾಣೆ-01 ಕಳೆದು ಹೋಗಿದ್ದ ಒಟ್ಟು 123 ಮೊಬೈಲ್‌ಗಳನ್ನು ಅಸ್ಸಾಂ, ಬಿಹಾರ, ಜಾರ್ಖಂಡ, ತೆಲಂಗಾಣ, ಆಂದ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ತೆಮಾಡಿ, ಮೊಬೈಲ್‌ಗಳನ್ನು ವಾರಸುದಾರರಿಗೆ ಒಪ್ಪಿಸಿದ್ದು. ಇವರ ಈ ಕಾರ್ಯವನ್ನು ಶ್ರೀ. ಶ್ರೀಹರಿಬಾಬು, ಬಿ.ಎಲ್ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

Comments


bottom of page