top of page

ಉಡುಪಿ: ಮೊಬೈಲ್ ಕೊಟ್ಟಿಲ್ಲ ಎಂದು ಬಾವಿಗೆ ಹಾರಿದ PUC ವಿದ್ಯಾರ್ಥಿ ಸಾವು!

  • Writer: venkibhat252
    venkibhat252
  • Nov 20, 2024
  • 1 min read

Updated: Nov 21, 2024

ಮೊಬೈಲ್ ಕೊಡದಿದ್ದಕ್ಕೆ ಬೇಸರ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ವಿದ್ಯಾರ್ಥಿ 17 ವರ್ಷದ ಪ್ರಥಮೇಶ್ ಮೃತದೇಹ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ.











ಉಡುಪಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಮಕ್ಕಳಿಂದ ಹಿಡಿದು ಯುವ ಜನತೆ ಮೊಬೈಲ್ ಬಳಕೆಯಲ್ಲಿ ಮುಳುಗುತ್ತಿದೆ. ಇನ್ನು ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಹಲವು ಜೀವವನ್ನು ಕಳೆದುಕೊಂಡಿದ್ದಾರೆ.

ಅದೇ ರೀತಿಯ ಘಟನೆ ಇದೀಗ ಉಡುಪಿಯಲ್ಲಿ ನಡೆದಿದೆ. ಮೊಬೈಲ್ ಕೊಡದಿದ್ದಕ್ಕೆ ಬೇಸರ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ವಿದ್ಯಾರ್ಥಿ 17 ವರ್ಷದ ಪ್ರಥಮೇಶ್ ಮೃತದೇಹ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ.


ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮೇಶ್ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿನ್ನೆ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಪ್ರಥಮೇಶ್ ಮನೆ ಬಿಟ್ಟು ಹೋಗಿದ್ದನು. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ಸ್ನೇಹಿತರು ಹುಡುಕಾಟ ನಡೆಸಿದ್ದರೂ ಪ್ರಥಮೇಶ್ ಪತ್ತೆಯಾಗಿರಲಿಲ್ಲ. ಆದರೆ ಇಂದು ಬಾವಿಯಲ್ಲಿ ಪ್ರಥಮೇಶ್ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

留言


bottom of page