top of page

ಬಿಜೆಪಿ ಬೃಹತ್ ಆಂದೋಲನ, ವಕ್ಫ್ ವಿರೋಧಿಸಿ ಬಿಜೆಪಿ ಹೋರಾಟ

  • Nov 22, 2024
  • 2 min read

ವಿಜಯನಗರ (ಹೊಸಪೇಟೆ) ನ,22.

ತಹಸಿಲ್ದಾರ್ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಬೃಹತ್ ಆಂದೋಲನ ಹಮ್ಮಿಕೊಂಡಿದ್ದರು. ಪ್ರಾಣ ಕೊಟ್ಟೆವು ಭೂಮಿ ಬಿಡೆವು.

ರೈತರ ಭೂಮಿ, ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಗಳ ಮೇಲೆ ವಕ್ಫ್ ನೋಂದಾಯಿಸಿ ರೈತರ ಬದುಕನ್ನು ಕತ್ತಲೆಗೆ ದೂಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೊ ಬಿಪಿಎಲ್ ಪಡಿತರ ಕಾರ್ಡ್ ರದ್ದತಿ ವಿಚಾರದಲ್ಲಿ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ,ಮಾನ್ಯ ಘನತೆವೆತ್ತ ರಾಜ್ಯಪಾಲರಿಗೆ, ಮನವಿ ಸಲ್ಲಿಸಿದರು.


ರಾಜ್ಯ ಸರಕಾರವು ವಕ್ಸ್ ಹೆಸರಿನಲ್ಲಿ ರೈತರ, ಹಿಂದೂಗಳ ಮಠ, ಮಂದಿರಗಳ ಜಮೀನನ್ನು ಪಡೆಯುತ್ತಿದೆ. ಈ ಜನವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಬಡವರ ಅನ್ನ ಕಸಿಯುವ ಬಿಪಿಎಲ್ ಪಡಿ ಚೀಟಿ ರದ್ದು ಮಾಡುವುದನ್ನು ವಿರೋಧಿಸಿ ಬಿಜೆಪಿ ಹೋರಾಟ ಮಾಡುತ್ತೇವೆ.


ಸರಕಾರದ ತಪ್ಪು ಆದೇಶದಿಂದ ರೈತರು, ಹಿಂದೂ ಮಠ ಮಂದಿರಗಳು,ಭಕ್ತರು, ಸ್ವಾಮೀಜಿಗೆ ಆತಂಕದಲ್ಲಿದ್ದಾರೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ನೋಟಿಸನ್ನು ಹಿಂಪಡೆದರೆ ಸಾಲದು: 1974ರ ಅಧಿಸೂಚನೆಯನ್ನೂ ರದ್ದು ಮಾಡಬೇಕು. ಈ ವಿಷಯದಲ್ಲಿ ಕೇವಲ ಕಣ್ಣೂರೆಸುವ ತಂತ್ರ ಮಾಡುವುದನ ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ.

ಸ್ವತಂತ್ರ ಭಾರತದಲ್ಲಿ ಈಗಲೂ ಒಂದು ವರ್ಗವನ್ನು ಓಲೈಸಲು ಕಂಡ ಕಂಡಲ್ಲಿ ಭೂಮಿ ಮಂಜೂರು ಮಾಡಲು ಕಾಂಗ್ರೆಸ್ ಪಕ್ಷ ಹೊರಟಿರುವುದು ಖಂಡನೀಯ.ಈಗಿರುವ ವಕ್ಫ್ ಕಾಯ್ದೆಯಲ್ಲಿ ದೇವಾಲಯ ಮಠ ನಮ್ಮದು ಅಂತಾ ಹೇಳಿದರೂ ಆಶ್ಚರ್ಯವಿಲ್ಲ.

ಮುಂದೊಂದು ದಿನ ಎಲ್ಲವೂ ನಮ್ಮದು ಎಂದು ವಕ್ಫ್ ಮಂಡಳಿ ಆದೇಶ ಹೊರಡಿಸಿದರೆ, ಅದನ್ನು ಪ್ರಶ್ನೆ ಮಾಡುವ ಹಕ್ಕು ಕೂಡ ನಮಗಿಲ್ಲ. ಪ್ರಶ್ನೆ ಮಾಡುವ ಹಕ್ಕು ಇರುವುದು ವಕ್ಫ್ ಮಂಡಳಿಗೆ ಮಾತ್ರ. ಹೀಗಾಗಿ ಈ ಕರಾಳ ಕಾಯ್ದೆಗೆ ತಿದ್ದುಪಡಿ ತರುವ ಅನಿವಾರ್ಯತೆ ಇದೆ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಬಿಪಿಎಲ್ ಪಡಿತರ ಚೀಟಿ ರದ್ದತಿ ಹಾಗೂ ಎಪಿಎಲ್ ಕಾರ್ಡ್ ರದ್ದತಿಯಿಂದ ಲಕ್ಷಾಂತರ ಜನರಿಗೆ ತೊಂದ ಆಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಪಡಿತರಿಗೆ ಅಕ್ಕಿ ನೀಡುತ್ತಿದ್ದು ಕಾರ್ಡ್ ರದ್ದತಿಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆ ಸಂಬಂಧಿತ ನೆರವೂ ಸಿಗದಿರುವ ಆತಂಕ ಜನರನ್ನು ಕಾಡುತ್ತಿದೆ ಎಂದು ತಮ್ಮ ಗಮನ ಸೆಳೆಯುತ್ತಿದ್ದೇವೆ.


ಬಡವರಿಗೆ ಮೊದಲು ನೋಟಿಸ್ ಕೊಟ್ಟು ಅವರ ಪಡಿತರ ಚೀಟಿಯನ್ನು ಬಿಪಿಎಲ್ ಕಾರ್ಡ್ ನ್ನಾಗಿ ಪರಿವರ್ತಿಸುವ ಕಾರ್ಯ ನಡೆಸಬೇಕಿತ್ತು. ಆದರೆ, ಎಪಿಎಲ್‌ ನ್ನಾಗಿ ಮಾಡಿದ್ದು ತೀವ್ರ ಖಂಡನೀಯ, ಜಮೀನನ್ನು ಏಕಾಏಕಿ ಪಹಣಿಯಲ್ಲಿ ವಕ್ಸ್ ಎಂದು ಬದಲಿಸಿದ ಮಾದರಿಯಲ್ಲಿ ಬಡಜನರ ಅನ್ನ ಕಸಿಯುವ ಕಾರ್ಯ ನಡೆದಿದೆ. ಇಂಥ ಜನವಿರೋಧಿ, ಬಡವರ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ತಮ್ಮ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬರುವ ಡಿಸೆಂಬರ್ ತಿಂಗಳ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ.


ಈ ಸಂದರ್ಭದಲ್ಲಿ ಚನ್ನಬಸವನಗೌಡ ಪಾಟೀಲ್ ,ಬಿಜೆಪಿ ಜಿಲ್ಲಾಧ್ಯಕ್ಷರು. ಬಿ ಶ್ರೀರಾಮುಲು.ಸಿದ್ದಾರ್ಥ್ ಸಿಂಗ್ ರಾಜ್ಯ ಯುವ ಮೋರ್ಚಾ ಕೋಶ ಅಧ್ಯಕ್ಷರು,ಜಂಬಯ್ಯ ನಾಯಕ ಮೋರ್ಚಾ ಉಪಾಧ್ಯಕ್ಷರು.ಅಶೋಕ್ ಜಿ. ಕೆ ಎಸ್ ರಾಘವೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜ್ಯ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಬಲ್ಲಹುಣಸಿಗೆ ರಾಮಣ್ಣ ಜಿಲ್ಲಾ ಪದಾಧಿಕಾರಿಗಳು ಮಂಡಲ ಅಧ್ಯಕ್ಷರುಗಳು ಎಲ್ಲಾ ಕಾರ್ಯಕರ್ತರು ಭಾಗಿಯಾಗಿದ್ದರು




Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Kommentare


bottom of page