top of page

ಲಿಪಿ ಸಂಸ್ಕಾರವು ಮಗುವಿಗೆ ತಾಯಿಯಿಂದಲೇ ಬರುತ್ತದೆ - ಡಾ.ಸಂಗಮೇಶ ಕಲ್ಯಾಣ , ಮೋಡಿಲಿಪಿ ತಜ್ಞರು, ಮುಧೋಳ

  • Nov 25, 2024
  • 1 min read

ಲಿಪಿ ರಚನೆಯ ವೈಶಿಷ್ಟ÷್ಯ ತಿಳಿದರೆ ಜಗತ್ತಿನ ಯಾವುದೇ ಭಾಷೆಯನ್ನು ಅರ್ಥೈಸಿಕೊಳ್ಳುವುದು ಕಷ್ಟವೆನಿಸಲಾರದು.











ಲಿಪಿ ಸಂಸ್ಕಾರವು ಮಗುವಿಗೆ ತಾಯಿಯಿಂದಲೇ ಬರುತ್ತದೆ ಎಂದು ಮುಧೋಳಿನ ಖ್ಯಾತ ಮೋಡಿಲಿಪಿ ತಜ್ಞರಾದ ಡಾ. ಸಂಗಮೇಶ ಕಲ್ಯಾಣ ಅವರು ಹೇಳಿದರು.

ಕನ್ನಡ ವಿಶ್ವವಿದ್ಯಾಲಯ, ಹಂಪಿ ಸಂಗೀತ ಮತ್ತು ನೃತ್ಯ ವಿಭಾಗದ ವತಿಯಿಂದ ದಿನಾಂಕ ೨೨.೧೧.೨೦೨೪ರಂದು ಹಮ್ಮಿಕೊಳ್ಳಲಾದ ಸ್ವರ ಸಂಚಾರ ವಿಶೇಷ ಉಪನ್ಯಾಸ ವೇದಿಕೆಯಲ್ಲಿ ಕನ್ನಡ ಲಿಪಿ ಮತ್ತು ಭಾಷೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಕನ್ನಡ ಲಿಪಿಯ ಬೆಳವಣ ಗೆ, ಮೋಡಿಲಿಪಿಯ ವೈಶಿಷ್ಟö್ಯ ಮತ್ತು ಲಿಪಿ ಹಾಗೂ ಭಾಷೆಗೆ ಇರುವ ಸಂಬAಧಗಳ ಕುರಿತು ವಿಸ್ತಾರವಾಗಿ ಚರ್ಚಿಸಿದರು. ತಾವೇ ಸ್ವತಃ ತಾಮ್ರಪಟದಲ್ಲಿ, ಕಾಷ್ಠದಲ್ಲಿ, ತಾಳೆಗರಿಯಲ್ಲಿ ರಚಿಸಿರುವ ರನ್ನನ ಗದಾಯುದ್ಧ ಕಾವ್ಯದ ಪುಟಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ ಅದರ ರಚನೆಯ ಹಿನ್ನೆಲೆ ಹಾಗೂ ಸ್ವರೂಪವನ್ನು ವಿವರಿಸಿದರು. ಈ ಕಾಲದಲ್ಲಿ ಈ ರೀತಿ ತಾಮ್ರಪಟದಲ್ಲಿ ಲಿಪಿ ಮಾಡಿದವರಲ್ಲಿ ಕಲ್ಯಾಣ ಯವರೇ ಮೊದಲಿಗರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆಂಗುಲಾಬಿ ಚಲನಚಿತ್ರ ಖ್ಯಾತಿಯ ಸಿನಿಮಾ ನಿರ್ದೇಶಕ ಶ್ರೀಧರ ಜಾವೂರ ಅವರು ``ನಮ್ಮ ಭಾಷೆ ನಮ್ಮ ಕನ್ನಡ'' ಎಂಬ ತಮ್ಮ ಹೊಸ ಸಿನಿಮಾದ ಕುರಿತು ಮಾತನಾಡಿದರು. ಜೊತೆಗೆ ಹೊಸ ಪ್ರತಿಭೆಗಳಿಗೆ ಸಿನಿಮಾ ವಲಯದಲ್ಲಿರುವ ಅವಕಾಶ ಹಾಗೂ ಅದನ್ನು ಅವರು ಸದುಪಯೋಗ ಪಡಿಸಿಕೊಳ್ಳುವ ರೀತಿಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು. ಕೇವಲ ಎರಡುವರೆ ತಾಸಿನ ಸಿನಿಮಾ ನಿರ್ದೇಶನಕ್ಕಿಂತಲೂ ಸಮಾಜಕ್ಕಾಗಿ ಸಾಧಕರನ್ನು ತಯಾರು ಮಾಡುವ ಗುರುವಿನ ಶಕ್ತಿ ದೊಡ್ಡದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಮೋಡಿಲಿಪಿ ಕಲಿಕೆಯಲ್ಲಿ ತಮ್ಮ ಮತ್ತು ಸಂಗಮೇಶ ಕಲ್ಯಾಣ ಯವರ ಬಹಳ ವರ್ಷಗಳ ಪಯಣವನ್ನು ಮೆಲಕು ಹಾಕಿದರು. ಕಲಿತ ಅಕ್ಷರದಿಂದ ಯಾವುದೇ ನಷ್ಟವಿಲ್ಲ; ಅದು ಸಮಾಜದಲ್ಲಿ ಒಂದಲ್ಲ ಒಂದು ರೀತಿ ಪ್ರಯೋಜನಕಾರಿಯಾಗುತ್ತದೆ ಎಂಬುದನ್ನು ತಮ್ಮ ಹಿಂದಣ ಅನುಭವಗಳ ಮೂಲಕ ಹಂಚಿಕೊAಡರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page