top of page

ಸ್ಪರ್ಧಾಥಿಗಳಲ್ಲಿ ಆಸಕ್ತಿ, ಕ್ಷಮತೆ ಮತ್ತು ಸಮಯ ಪಾಲನೆ ಅಗತ್ಯ : ಡಾ. ಎಫ್.ಟಿ. ಹಳ್ಳಿಕೇರಿ ಪ್ರಾಧ್ಯಾಪಕರು

  • Nov 25, 2024
  • 1 min read

ಇದು ಸ್ಪರ್ಧಾತ್ಮಕ ಯುಗ. ಈ ಯುಗದಲ್ಲಿ ಪರೀಕ್ಷಾರ್ಥಿಗಳು ನಿರಂತರ ಅಧ್ಯಯನ, ಸ್ವ-ಆಸಕ್ತಿ, ಕ್ಷಮತೆ ಮತ್ತು ಸಮಯ ಪರಿಪಾಲನೆಯನ್ನು ರೂಢಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ಭಾಷಾ ನಿಕಾಯದ ಡೀನರಾದ ಡಾ. ಎಫ್.ಟಿ. ಹಳ್ಳಿಕೇರಿ ಅವರು ಅಭಿಪ್ರಾಯಪಟ್ಟರು.











ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಿನಾಂಕ ೨೧.೧೧.೨೦೨೪ರಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಮತ್ತು ಸಮಾಜಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಎರಡು ವಾರಗಳ ಕಾಲ ಆಯೋಜಿಸಿದ್ದ ಯುಜಿಸಿ ನೆಟ್ ಮತ್ತು ಕೆ-ಸೆಟ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಮುಂದುವರೆದು ಮಾತನಾಡುತ್ತ ಇಂದು ಕೆ.ಎ.ಎಸ್., ಐ.ಎ.ಎಸ್., ಪಿಡಿಓ ಹೀಗೆ ಹಲವಾರು ಅವಕಾಶಗಳಿವೆ. ವಿದ್ಯಾರ್ಥಿಗಳು ಯಾವುದಾದರೂ ಒಂದನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಓದು, ಬರಹ, ಪರೀಕ್ಷೆಗಳಿಗೆ ತಯಾರಿ ಎಲ್ಲದರಲ್ಲೂ ಕಟ್ಟುನಿಟ್ಟಾಗಿ ಸಮಯ ಪರಿಪಾಲಿಸುವುದು ಅಗತ್ಯ. ಸಮಯ ಪರಿಪಾಲನೆಗಾಗಿ ವೇಳಾಪಟ್ಟಿಯನ್ನು ಹಾಕಿಕೊಳ್ಳಬೇಕು. ಇದರಿಂದ ಹಿಡಿದ ಕೆಲಸವನ್ನು ಪರಿಪೂರ್ಣಗೊಳಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಕ್ರಮ ಮತ್ತು ಆಸ್ವಾದಿಸುವ ಕ್ರಮ ತುಂಬಾ ಮುಖ್ಯ. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಲಕ್ಷö್ಯಕೊಟ್ಟು ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಮುಂದಿನ ದಿನಮಾನಗಳಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಆರಂಭಿಸಲು ಮಾನ್ಯ ಕುಲಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comentarios


bottom of page