top of page

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ

  • Nov 27, 2024
  • 2 min read

ನ.26, ಹಂಪಿ, ವಿಜಯನಗರ

ಸಂಶೋಧನಾರ್ಥಿಗಳೆ ನೀವೆಲ್ಲರೂ ಒಮ್ಮೆ ಸಂವಿಧಾನವನ್ನು ಓದಲೇಬೇಕು ಎಂದು ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರು ಆದ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.











ಕನ್ನಡ ವಿಶ್ವವಿದ್ಯಾಲಯ, ಹಂಪಿ ದಲಿತ ಸಂಸ್ಕೃತಿ ಅಧ್ಯಯನ ಪೀಠವು ೨೬ನೇ ನವೆಂಬರ್ ೨೦೨೪ರಂದು ಪಂಪ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನ ಸಮರ್ಪಣ ದಿನಾಚರಣೆ ಯಲ್ಲಿ ವಿಶೇಷ ಉಪನ್ಯಾಸ ನೀಡುತ್ತ, ಸ್ವತಂತ್ರ ಭಾರತಕ್ಕೆ ಸಂವಿಧಾನ ಸಮರ್ಪಣ ಮಾಡಿದ ದಿನ ನವೆಂಬರ್ ೨೬ ಐತಿಹಾಸಿಕವಾಗಿದೆ. ಬಹುಸಂಸ್ಕೃತಿ ಬಹುಧರ್ಮ, ಬಹು ಸಾಮಾಜಿಕ ಸ್ಥಳೀಯ ರಚನೆಗಳಿರುವ ಭಾರತ ದೇಶದಲ್ಲಿ ಬಹುಶಿಸ್ತೀಯ ಜೀವಾಳ ಅಡಗಿರುವ ಸಂವಿಧಾನ ಪುಸ್ತಕವನ್ನೇ ಅಂಬೇಡ್ಕರ್ ನಮಗೆ ಕೊಟ್ಟರು.

ಬಹುಭಾಷಾ ಪಂಡಿತರು ಅರ್ಥಶಾಸ್ತç, ರಾಜ್ಯಶಾಸ್ತç, ನೀತಿಶಾಸ್ತç, ಧರ್ಮಶಾಸ್ತç, ಪತ್ರಿಕೋದ್ಯಮ ಹೀಗೆ ಬಹುಮುಖ ದೈತ್ಯಪ್ರತಿಭೆಯಾದ ಅಂಬೇಡ್ಕರ್ ಅವರೊಂದಿಗೆ ಸಂವಿಧಾನ ರಚನಾ ಸಭೆಯಲ್ಲಿ ೨೯೯ ಮಂದಿ ಪ್ರತಿಭೆಯುಳ್ಳ ವಿದ್ವಾಂಸರಿದ್ದರು. ೧೯೪೪ರಲ್ಲಿ ಕ್ಯಾಬಿನೆಟ್ ಕಮಿಷನ್‌ದ ಪೂರ್ವ ನಿರ್ಧಾರದಂತೆ ನೀವು ಎಷ್ಟು ತ್ವರಿತವಾಗಿ ಸಂವಿಧಾನ ರಚಿಸಿಕೊಟ್ಟರೆ ಅಷ್ಟುಬೇಗ ನಾವು ಸ್ವತಂತ್ರ ಕೊಡುತ್ತೇವೆ ಎಂದು ಕಮಿಷನ್ ತಿಳಿಸಿತ್ತು. ಅಂತೆಯೇ ೨ ವರ್ಷ ೧೧ ತಿಂಗಳು ೧೭ ದಿನಗಳ ಕಾಲ ಅಂದರೆ ಸುಮಾರು ೩ ವರ್ಷ ಸಮಯದಲ್ಲಿ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿಕೊಟ್ಟರು. ಪ್ರಜಾಪ್ರಭುತ್ವ ವ್ಯವಸ್ಥೆ, ಸಾಮಾಜಿಕ ನ್ಯಾಯ, ಗಣತಂತ್ರದಂತಹ ಮೌಲ್ಯಗಳನ್ನು ಬುದ್ಧತತ್ವದಿಂದಲೂ ಹಾಗೂ ಸಾಮಾಜಿಕ ನ್ಯಾಯ, ಸ್ವಾತಂತ್ರö್ಯ, ಸಮಾನತೆ, ಭ್ರಾತೃತ್ವದಂತಹ ಮೌಲ್ಯಗಳನ್ನು ಫ್ರೆಂಚ್ ಕ್ರಾಂತಿಯ ಪ್ರಭಾವದಿಂದ ಅಂಬೇಡ್ಕರ್ ಅವರು ಪಡೆದಿದ್ದರು. ಸಂವಿಧಾನ ರಚಿಸುವಾಗ ಅಂಬೇಡ್ಕರ್ ಅವರ ಮುಂದೆ ಅನೇಕ ಸವಾಲುಗಳಿದ್ದವು. ಎಲ್ಲ ಸವಾಲುಗಳ ನಡುವೆಯು ಅಂಬೇಡ್ಕರ್ ಧರ್ಮ ನಿರಪೇಕ್ಷವಾಗಿರುವ ಸಂವಿಧಾನವನ್ನು ಕಟ್ಟುತ್ತಿದ್ದರು. ಪೀಠಿಕೆಯ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಸಂವಿಧಾನದ ತಿದ್ದುಪಡಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಂವಿಧಾನದ ಪರಿಷ್ಕರಣೆಗೆ, ಬದಲಾವಣೆಗೆ ಎಲ್ಲಿಯೂ ಅವಕಾಶ ನೀಡಿಲ್ಲ ಎಂದು ನಾಗರಾಜಯ್ಯ ಅವರು ತಿಳಿಸಿದರು. ಅಂಬೇಡ್ಕರ್ ಅವರಂತಹ ಮಹಿಳಾ ಸಮಾನತೆಯ ಪ್ರತಿಪಾದಕ ಬೇರೊಬ್ಬರಿಲ್ಲ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಜಾತ್ಯಾತೀತ ಪದ ಬಳಕೆಯ ಆಕ್ಷೇಪ ತಳ್ಳಿಹಾಕಿದ ಸುಪ್ರೀಂ ಕೋರ್ಟಿನ ತೀರ್ಮಾನವು ಹೆಮ್ಮೆಯ ವಿಷಯವಾಗಿದೆ. ಸಂವಿಧಾನದ ಒಂದೊಂದು ತಿದ್ದುಪಡಿಗಳು ಚರಿತ್ರಾರ್ಹವಾಗಿವೆ. ಸೆಕ್ಯೂಲರಿಸಂ ಜೀವನದ ಪದ್ಧತಿಯಾಗಿದೆ. ಜೀವನದ ಮೌಲ್ಯವಾಗಿದೆ. ಇಂದು ನಾವೆಲ್ಲ ಭಾರತೀಯರು ಎಂಬ ಗೌರವ ಕಡಿಮೆಯಾಗಿ ಧರ್ಮ, ಜಾತಿ, ವಿಜೃಂಭಿಸುತ್ತಿವೆ ಎಂದು ವಿಷಾದಿಸಿದರು.

ವಿಶೇಷ ಉಪನ್ಯಾಸಕರನ್ನು ಗೌರವಿಸಿ ಅಧ್ಯಕ್ಷತೆ ವಹಿಸಿ ಮಾನ್ಯ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಮಾತನಾಡುತ್ತ ಜ್ಞಾನದ ಅಸಮಾನತೆ, ಸಂಪತ್ತಿನ ಅಸಮಾನತೆ, ಸಾಮಾಜಿಕ ಅಸಮಾನತೆಗಳ ನಡುವೆ ಸಂವಿಧಾನ ನಮಗೆ ಸಮಾನತೆ ನೀಡಿದೆ. ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಇದನ್ನು ಗಟ್ಟಿ ಮಾಡುವತ್ತ ನಾವೆಲ್ಲ ಹೆಜ್ಜೆ ಹಾಕೋಣ ಎಂದು ಹೇಳಿದರು.

ಪೀಠದ ಸಂಚಾಲಕರಾದ ಡಾ.ಎನ್. ಚಿನ್ನಸ್ವಾಮಿ ಸೋಸಲೆ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡುತ್ತ, ನಮ್ಮ ಸಂವಿಧಾನ, ನಮ್ಮ ಸ್ವಾಭಿಮಾನ ಘೋಷಣೆಯಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತ ಸಂವಿಧಾನವು ಭಾರತ ಮತ್ತು ಭಾರತೀಯರನ್ನು ಒಂದುಗೂಡಿಸಿದೆ ಎಂದು ಸಂವಿಧಾನ ಕರ್ತೃ ಅಂಬೇಡ್ಕರ್ ಅವರನ್ನು ನೆನೆದರು.

ಸಂವಿಧಾನದ ಪ್ರಸ್ತಾವನೆಯ ಪ್ರಮಾಣ ವಚನವನ್ನು ಎಲ್ಲರೂ ಸ್ವೀಕರಿಸಿದರು. ವೇದಿಕೆಯ ಮೇಲಿರುವ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವಂದಿಸಿದರು.ಧೀನರು, ಅಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Recent Posts

See All
ಮೇ.2 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಆರಂಭ

ವಿಜಯನಗರ(ಹೊಸಪೇಟೆ), ಏಪ್ರಿಲ್.29 : ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು...

 
 
 

Comments


bottom of page