top of page

ನಿಂಗಪ್ಪ ಸುದ್ದಿ ವಕೀಲರಿಗೆ ಬಸವ ಕಾಯಕ ಪ್ರಶಸ್ತಿ ಗೌರವ

  • Writer: newsnowvijayanagar
    newsnowvijayanagar
  • Dec 9, 2024
  • 1 min read

ಗಂಗಾವತಿ: ಸದ್ದಿಲ್ಲದ ವಕೀಲ ವೃತ್ತಿ ಹಾಗು ರಂಗಭೂಮಿ ಚಲನಚಿತ್ರಗಳಲ್ಲಿ ಹೆಸರು ಮಾಡುತ್ತಿರುವ ಸಜ್ಜನ ವ್ಯಕ್ತಿತ್ವದ ನಿಂಗಪ್ಪ ಸುದ್ದಿ ವಕೀಲರಿಗೆ ಶ್ರೀ ಜಗದ್ಗುರು ಅನ್ನದಾನೀಶ್ವರ ಮುಂಡರಗಿ ಶಾಖಾ ಮಠ ತಳಕಲ್‌ನ ಶ್ರೀ ಮ.ನಿ.ಪ್ರ.ಡಾ.ಮಹಾದೇವ ಮಾಹಾಸ್ವಾಮಿಗಳು ಸುಕ್ಷೇತ್ರದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಬಸವ ಕಾಯಕ — ೨೦೨೪ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.



ಶರಣ ಪರಂಪರೆಯ ಅನೇಕ ನಾಟಕಗಳು ಸೇರಿದಂತೆ ಸಾಮಾಜಿಕ ಕಳಕಳಿಯ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು.ಇತ್ತೀಚಿಗೆ ಮುಂಡರಗಿಯ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಮೈನಳ್ಳಿ,ಶ್ರೀ.ಚಿದಾನಂದ ಮಹಾಸ್ವಾಮಿಗಳು, ಶ್ರೀ ಶಿವಯೋಗಿ ಶ್ರೀಗಳು ಸರಟೂರು ಮುಂತಾದವರು ಶ್ರೀಗಳು ಸೇರಿದಂತೆ ಕುಮಾರ ಶಾಸ್ತಿ ಹಿರೇಮಠ, ಸಂಗಮೇಶ್ ಕಲ್ಮಠ, ಎಂ.ಮುದಿಯಪ್ಪ,ಮಲ್ಲಪ್ಪ ಬಂಗಾರಿ,ಮಲ್ಲಪ್ಪ ಹಾಗು ಬಸವರಾಜ್ ಇತರರಿದ್ದರು

Comments


bottom of page