top of page

ಜೂ.1ರಂದು ಹೂವಿನಹಡಗಲಿ ಉಪನೋಂದಣಿ ಕಚೇರಿ ಕಾರ್ಯಾರಂಭ

  • Writer: newsnowvijayanagar
    newsnowvijayanagar
  • May 30
  • 1 min read

ವಿಜಯನಗರ(ಹೊಸಪೇಟೆ), ಮೇ.30: ಸರ್ಕಾರದ ಆದೇಶದಂತೆ ಜಿಲ್ಲೆಯ ಒಂದು ಉಪನೋಂದಣಿ ಕಚೇರಿ ಪ್ರತಿ ಭಾನುವಾರ, 2ನೇ ಶನಿವಾರ ಹಾಗೂ 4ನೇ ಶನಿವಾರ ರಜಾ ದಿನಗಳಂದು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ರಜಾ ದಿನಗಳಂದು ಕಾರ್ಯನಿರ್ವಹಿಸಿದ ಉಪ ನೋಂದಣಿ ಕಚೇರಿ ಮಂಗಳವಾರದ0ದು ರಜೆ ಘೋಷಿಸಲಾಗಿರುತ್ತದೆ.

ಜಿಲ್ಲೆಯ ಐದು ಉಪ ನೋಂದಣಿ ಕಚೇರಿ ಪೈಕಿ ಹೂವಿನಹಡಗಲಿ ಉಪ ನೋಂದಣಿ ಕಚೇರಿ ಜೂ.1 ರಂದು ಭಾನುವಾರದಂದು ಕಾರ್ಯ ನಿರ್ವಹಿಸುತ್ತದೆ. ಹಾಗೂ ಜಿಲ್ಲೆಯ ಇತರೆ ಉಪ ನೋಂದಾಣಿ ಕಚೇರಿಗಳು ಕಾರ್ಯನಿರ್ವಹಿಸುವ ರಜಾದಿನಗಳ ದಿನಾಂಕವನ್ನು ಇಲಾಖೆಯ ಕಚೇರಿ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಲಾಗಿರುತ್ತದೆ. ರಜಾ ದಿನಗಳಂದು ಜಿಲ್ಲೆಯ ಎಲ್ಲಾ ತಾಲೂಕುಗಳ ಉಪ ನೋಂದಾಣಿ ಕಚೇರಿ ವ್ಯಾಪ್ತಿಯ ಸ್ವತ್ತುಗಳ ನೋಂದಾಣಿಯನ್ನು ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿಜಯನಗರ ಜಿಲ್ಲಾ ನೋಂದಾಣಾಧಿಕಾರಿಗಳಾದ ಸೈಯದ್ ಖಾದರ್ ಕೊಪ್ಪಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments


bottom of page