top of page

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರು ಕೆ,ವಿಕ್ರಮ್ ರಾವ್ ನಿಧನ

  • Writer: newsnowvijayanagar
    newsnowvijayanagar
  • May 13
  • 1 min read
ree

ವಿಜಯನಗರ(ಹೊಸಪೇಟೆ) ಮೇ,13: ದೇಶದ ಹಿರಿಯ ಪತ್ರಕರ್ತ ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಐ ಎಫ್ ಡಬ್ಲ್ಯೂ ಜೆ)ಅಧ್ಯಕ್ಷ ಕೆ ವಿಕ್ರಂ ರಾವ್ ನಿಧನರಾಗಿದ್ದಾರೆ ಸುದೀರ್ಘ ಕಾಲದ ವರೆಗೆ ಅಧ್ಯಕ್ಷರಾಗಿದ್ದ ಇವರು ಹೃದಯಘಾತದಿಂದ ಉತ್ತರ ಪ್ರದೇಶದ ಲಖನೌ ದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ ಮಂಗಳವಾರ ಲಖನೌದಲ್ಲಿ ಅಂತ್ಯಕ್ರಿಯೆ ಜರುಗಿದೆ ಎಂದು ಕುಟುಂಬ ವರ್ಗ ತಿಳಿಸಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಗಾರರಾಗಿದ್ದ ಇವರು ಪತ್ರಕರ್ತರಿಗೆ ಕಾರ್ಮಿಕ ಕಾಯಿದೆ ಅಡಿ ಸಿಗುವ ಸೌಲಭ್ಯಗಳ ಕುರಿತು ಹೋರಾಟ ಮಾಡುವ ಮೂಲಕ ಅನೇಕ ವೇತನ ಆಯೋಗ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಮೃತರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಇವರ ನೇತೃತ್ವದಲ್ಲಿ ಶ್ರವಣ ಬೆಳಗೊಳದಲ್ಲಿ ಮತ್ತು ಆದಿ ಚುಂಚನಗಿರಿಯಲ್ಲಿ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ ನಡೆಸಲಾಗಿತ್ತು ಇವರ ನಿಧನಕ್ಕೆ ರಾಜ್ಯದ್ಯಕ್ಷರು ಶಾಂತಕುಮಾರಿ ಹಾಗೂ ಕಾರ್ಯದರ್ಶಿ ಮುರುಳಿಧರ್, ಸೋಮಶೇಖರಯ್ಯ ಹಿರೇಮಠ ಸುವರ್ಣ ವಾಹಿನಿ ಪತ್ರಿಕೆ ವರದಿಗಾರರು, ವ್ಯಾಸರಾಜ ಜೋಶಿ, ಪ್ರಕಾಶ್ ಕಾಕುಬಾಳು ಪ್ರಥಮ ಹೆಜ್ಜೆ ಶೇಷಾದ್ರಿ ರಾವ್,ದಿ ಡೈಲಿ ನ್ಯೂಸ್ ಅಂಬರೀಶ್, ಕನ್ನಡ ಭಾರತಿ,ಬಸವರಾಜ ಸ್ವಾಮಿ ಹೊನ್ನುಡಿ ಪತ್ರಿಕೆ ವರದಿಗಾರರು.ಗಿರೀಶ್ ಗೌಡ, ಅಬ್ದುಲ್,ಪ್ರಶಾಂತ್, ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

Comments


bottom of page