top of page

ಭಾರತಕ್ಕೆ ಮತ್ತೊಂದು ವಿಶ್ವ ವಿಜೇತ ಕಿರೀಟ; ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್​ ಗೆದ್ದ ಕೊನೇರು ಹಂಪಿ!

  • Writer: newsnowvijayanagar
    newsnowvijayanagar
  • Dec 31, 2024
  • 1 min read

ಬೆಂಗಳೂರು: ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್-2024​ ಫೈನಲ್ ಪಂದ್ಯದಲ್ಲಿ ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್​ ಕೊನೇರು ಹಂಪಿ ಅವರು ಗೆದ್ದು ಚಾಂಪಿಯನ್ ಆಗಿದ್ದಾರೆ. ಮಹಿಳಾ ಗ್ರ್ಯಾಂಡ್ ಮಾಸ್ಟರ್​ ಕೊನೇರು ಹಂಪಿ ಅವರು 2ನೇ ಬಾರಿಗೆ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಇದರೊಂದಿಗೆ, ಭಾರತದ ಮುಕುಟಕ್ಕೆ ಮತ್ತೊಂದು ಗರಿ ಒಲಿದು ಬಂದಂತಾಗಿದೆ. ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನೂ ಸಹ ಬರೆದಿರುವ ಕೊನೇರು ಹಂಪಿ ಅವರು ಒಲಿಂಪಿಯಾಡ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.


ree

Comments


bottom of page