top of page

ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ವಿಜೇತರಾದ ಬೇತಲ್ ಮಹಿಳಾ ಮಹಾವಿದ್ಯಾಲಯ ಕ್ರೀಡಾಪಟುಗಳು

  • Writer: newsnowvijayanagar
    newsnowvijayanagar
  • Dec 31, 2024
  • 1 min read

ree

ಗಂಗಾವತಿ :- ಇತ್ತೀಚಿಗೆ ಬಿಜಾಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ಕರಾಟೆ, ಕುಸ್ತಿ, ಪೆಂಕಾಕ್ ಸಿಲತ್, ವುಶೂ ಕ್ರೀಡೆಗಳ ಅಂತರ ವಿದ್ಯಾಲಯ ಕ್ರೀಡಾಕೂಟ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಗರದ ಬೇತಲ್ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಿ ವಿಜೇತರಾಗಿರುತ್ತಾರೆ.


ಕುಸ್ತಿ ಕ್ರೀಡೆಯಲ್ಲಿ ಆಶಾ -55 ಕೆಜಿ ವಿಭಾಗದಲ್ಲಿ ಪ್ರಥಮ ಮತ್ತು ಐಶ್ವರ್ಯ -50 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಪೆಂಕಾಕ್ ಸಿಲತ್ ಕ್ರೀಡೆಯಲ್ಲಿ ಐಶ್ವರ್ಯ -45 ಕೆಜಿ ವಿಭಾಗದಲ್ಲಿ, ರುಚಿತಾ -55 ಕೆ.ಜಿ ವಿಭಾಗದಲ್ಲಿ, ಅಸ್ಮಾ 60 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಮಹಮ್ಮದಿ ಬೇಗಂ -45 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.


ಕರಾಟೆ ಕ್ರೀಡೆಯಲ್ಲಿ ಕಥಾ (ಕಾಲ್ಪನಿಕ ಯುದ್ದ) ಮತ್ತು ಕುಮಿಟೆ (ಫೈಟ್ ) ವಿಭಾಗದಲ್ಲಿ ಐಶ್ವರ್ಯ -45 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಗುಂಪು ಫೈಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.


ವುಶೂ ಕ್ರೀಡೆಯಲ್ಲಿ ಸಾಂದ ( ಫೈಟ್) ವಿಭಾಗದಲ್ಲಿ ಐಶ್ವರ್ಯ - 45 ಕೆಜಿ ವಿಭಾಗದಲ್ಲಿ ದ್ವಿತೀಯಸ್ಥಾನ , ಆಶಾ -55 ಕೆಜಿ ವಿಭಾಗದಲ್ಲಿ ದ್ವಿತೀಯಸ್ಥಾನ , ಪರಿಮಳ -48 ಕೆಜಿ ವಿಭಾಗದಲ್ಲಿ ದ್ವಿತೀಯಸ್ಥಾನ, ಮಹಮ್ಮದಿ ಬೇಗಂ -45 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.


ವುಶೂ ಕ್ರೀಡೆಯ ತೌಲು ( ಕಾಲ್ಪನಿಕ ಯುದ್ಧ ) ಮಹಮ್ಮದಿ ಬೇಗಂ - ತೈಜಿಶಾನ್ ವಿಭಾಗದಲ್ಲಿ ಪ್ರಥಮ, ರುಚಿತಾ - ನನಕ್ವಾನ್ ವಿಭಾಗದಲ್ಲಿ ಪ್ರಥಮ, ಪರಿಮಳ - ಚಾನ್ಕ್ವಾನ್ ವಿಭಾಗದಲ್ಲಿ ಪ್ರಥಮ, ಆಶಾ- ತೈಜಿಕ್ವಾನ್ ವಿಭಾಗದಲ್ಲಿ ಪ್ರಥಮ, ಐಶ್ವರ್ಯ - ದಾಶು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.


ಅಂತರವಿ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ವಿಜೇತರಾಗಿ ವಿವಿಧ ರಾಜ್ಯಗಳಳಲ್ಲಿನ ವಿಶ್ವವಿದ್ಯಾಲಯಗಳ ನೇತೃತ್ವದಲ್ಲಿ ನಡೆಯುವಂತಹ ಅಖಿಲ ಭಾರತ ವಿಶ್ವವಿದ್ಯಾಲಯದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವಂತಹ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದರು.



ಈ ವೇಳೆಯಲ್ಲಿ ಆಡಳಿತ ಅಧಿಕಾರಿಗಳಾದ ಹೇಮಾ ಸುಧಾಕರ್, ಅಧ್ಯಕ್ಷರಾದ ರಾಜು ಸುಧಾಕರ್, ಕಾರ್ಯದರ್ಶಿ ಮತ್ತು ಪ್ರಾಂಶುಪಾಲರಾದ ಬ್ಯಾಬೇಜ್ ಮಿಲ್ಟನ್, ಖಜಾಂಚಿಗಳಾದ ಸುಜಾತ ರಾಜು, ಪದವಿ ಪ್ರಾಚಾರ್ಯರಾದ ಬಿಂಗಿ ವೆಂಕಟೇಶ್ , ವಿಶೇಷ ಕ್ರೀಡೆಗಳ ಮುಖ್ಯ ತರಬೇತುದಾರರಾದ ಬಾಬುಸಾಬ್, ದೈಹಿಕ ಶಿಕ್ಷಕರಾದ ಆನಂದ್ ರಾಠೋಡ್ ಉಪಸ್ಥಿತರಿದ್ದರು.

Comments


bottom of page