top of page

ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಯೋಗ ಸ್ಪರ್ಧೆಗೆ ಏಳು ವಿದ್ಯಾರ್ಥಿಗಳು ಆಯ್ಕೆ.

  • Writer: newsnowvijayanagar
    newsnowvijayanagar
  • Dec 25, 2024
  • 1 min read

ಕೊಪ್ಪಳಡಿ. : ಅಖಿಲ ಭಾರತಅಂತರ್ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳೆಯರ ಯೋಗ ಸ್ಪರ್ಧೆಯು ದಿನಾಂಕ ೨೪-೧೨-೨೦೨೪ ರಿಂದ ೨೭-೧೨-೨೦೨೪ ರವರೆಗೆ ಓಡಿಸ್ಸಾದ ಕೆ.ಐ.ಟಿ.ಟಿ. ವಿಶ್ವವಿದ್ಯಾಲಯ, ಭುವನೇಶ್ವರದಲ್ಲಿ ಜರುಗಲಿದೆ. ಸದರಿ ಪಂದ್ಯಾಟಕ್ಕೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಕು.ಕಿರಣಕುಮಾರ, ಬಿ.ಕಾಂ ಅಂತಿಮದ ವರ್ಷದ ವಿದ್ಯಾರ್ಥಿಕು.ಅನಿತ, ಮತ್ತು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕು.ಸೌಮ್ಯ ಸಂಗಪ್ಪ, ಕು. ವರ್ಷಾ ಬಿ., ಕು. ನಾಗವೇಣಿ ಎ, ಕು.ಚಂದ್ರಿಕಾ, ಕು.ರಶ್ಮಿ ಕೆ.ಇವರುಗಳು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದತಂಡದ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ.


ಸದರಿ ಏಳು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ.ಆರ್ ಮರೇಗೌಡ ಮತ್ತು ಶ್ರೀ ಗವಿಸಿದ್ಧೇಶ್ವರ ಟ್ರಸ್ಟಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಡಾ.ಚನ್ನಬಸವ, ಕಾಲೇಜಿನದೈಹಿಕ ನಿರ್ದೇಶಕರಾದ ಶ್ರೀ ವಿನೋದ ಸಿ.ಮುದಿನಬಸನಗೌಡರ ಹಾಗೂ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Comments


bottom of page