top of page

ಅಗಲಿದ ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ

  • Writer: newsnowvijayanagar
    newsnowvijayanagar
  • Dec 12, 2024
  • 1 min read

ಅಜಾತ ಶತ್ರುವಿಗೆ ಶೋಕ ಸಾಗರದ ನಡುವೆ ಅಂತಿಮ ವಿದಾಯ


ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಹುದ್ದೆಗಳನ್ನು ಅಲಂಕರಿಸಿ ದಶಕಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದ ಎಸ್.ಎಂ. ಕೃಷ್ಣ ಅವರು ತಮ್ಮ ೯೨ ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ಮೊನ್ನೆ ನಿಧನಾರಿಗಿದ್ದು ನಿನ್ನೆ ಅವರ ಅಂತ್ಯ ಕ್ರಿಯೆಯನ್ನು ಅವರ ಸ್ವಂತ ಊರಾದ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು, ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಸಂಸದರು, ವಿಧಾನ ಸಭಾ ಸದಸ್ಯರು ಆದಿಯಾಗಿ ಅನೇಕರು ಭಾಗವಹಿಸಿ ಅಗಲಿದ ಚೇತನಕ್ಕೆ ಅಂತಿಮ ವಿದಾಯ ಸಲ್ಲಿಸಿದರು.


ರಾಜ್ಯಕ್ಕೆ ಅನೇಕ ಪ್ರಥಮ ಕೊಡುಗೆಗಳನ್ನು ನೀಡಿದ್ದ ಎಸ್,ಎಮ್. ಕೃಷ್ಣ ಅವರು ಎಂದೆ0ದಿಗೂ ಅಜರಾಮರರಾಗಿ ಜನಮಾನಸದಲ್ಲಿ ಉಳಿದಿರುತ್ತಾರೆ. ಪತ್ರಿಕೆಯ ಅಶ್ರು ನಮನ.

Comments


bottom of page