top of page

ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಗೆ ಆಹ್ವಾನ !

  • Nov 22, 2024
  • 1 min read

ಕೊಪ್ಪಳ: ಆದಿ ಅನಾದಿ ಕಾಲದಿಂದ, ಸಾಹಿತ್ಯದಲ್ಲಿ ಚುಟುಕಿಗೆ ಪ್ರಾಧಾನ್ಯತೆ ಸಿಕ್ಕಿದೆ. ರಾಜ್ಯಮಟ್ಟದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಗುರುತಿಸಿಕೊಂಡಂತೆ ಕೊಪ್ಪಳವು ಹಿಂದೆ ಬಿದ್ದಿಲ್ಲ.











ದಿ. ಹನುಮಂತಪ್ಪ ಅಂಡಗಿ ಚಿಲವಾಡಗಿ ನಿರಂತರ, 12 ವರ್ಷ ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ತಿನ ಪೋಷಕರಾಗಿ ಮುನ್ನಡೆಸಿದ್ದರು. ಅವರ ಆಶಯ ಮುಂದುವರೆಸುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಹಿನ್ನಲೆಯಲ್ಲಿ ಕೊಪ್ಪಳ ಚುಟುಕು ಸಾಹಿತ್ಯ ಪರಿಷತ್ತಿಗೆ ಜೀವ ತುಂಬುವ ಹಾದಿಯಲ್ಲಿ, ಕೊಪ್ಪಳ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಗೆ, ಕವಿಗಳಿಗೆ ಆಹ್ವಾನ ನೀಡಲಾಗಿದೆ. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತನ್ನು ಡಾ ಎಂ ಜಿ ಆರ್ ಅರಸ್ ಉದ್ಘಾಟಿಸಲಿದ್ದು, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರoಭದ ನಡೆಯಲಿದೆ. ಈ ಸಂದರ್ಭದಲ್ಲಿ ಡಿಸೆಂಬರ್ ೧ ರಂದು ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಕವನ ವಾಚಿಸುವ ಕವಿಗಳು,ಡಿ.೧ರಂದು ಸಂಜೆ ೪ರಿಂದ ೯ ರವರೆಗೆ ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಶಾಂತಿ ನಿಕೇತನ ಕಟ್ಟಡ ಆವರಣದ, ಸೇಂಟ್ ಫಾಲ್ಸ್ ಪದವಿ ಕಾಲೇಜ್ ಸಭಾಂಗಣದಲ್ಲಿ ಕಾಯ೯ಕ್ರಮ ನಡೆಯಲಿದ್ದು, ಭಾಗವಹಿಸುವ ಕವಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಆಸಕ್ತ ಕವಿಗಳು, ಕವಿಯಿತ್ರಿಯರು ತಮ್ಮ ಹೆಸರನ್ನು ಶಿವಪ್ರಸಾದ್ ಹಾದಿಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ ಮೊ:79967 90189 ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನವಂಬರ್ ೨೫ ನೋಂದಾಯಿಸಲು ಕೊನೆ ದಿನ. ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ರುದ್ರಪ್ಪಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comentarios


bottom of page